ಶಾಲೆ ಆರಂಭಕ್ಕೆ ಸರ್ಕಾರ ಚಿಂತನೆ; ಜನಪ್ರತಿನಿಧಿಗಳ ಅಭಿಪ್ರಾಯ ಕೇಳಿ ಪತ್ರ ಬರೆದ ಸುರೇಶ್ ಕುಮಾರ್

ಮಂಗಳವಾರ, 29 ಸೆಪ್ಟಂಬರ್ 2020 (10:15 IST)
ಬೆಂಗಳೂರು : ಶಾಲೆ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಇದರಿಂದ ಪೋಷಕರು ಆತಂಕ ಹೆಚ್ಚಾಗಿದ್ದು, ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕೊರೊನಾ ಮಹಾಮಾರಿ ಹೆಚ್ಚುತ್ತಿದ್ದು, ಈ ನಡುವೆ ಶಾಲೆಗಳನ್ನು ಶುರು ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಆದಕಾರಣ ಶಾಲೆ ಪುನಾರಂಭಿಸಲು ದಿನಾಂಕ ನಿಗದಿಗೆ ಜನಪ್ರತಿನಿಧಿಗಳ ಅಭಿಪ್ರಾಯ ಕೇಳಿ ಶಾಸಕರು, ಸಂಸದರಿಗೆ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. ಈ ಬಗ್ಗೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕೊರೊನಾ ಭೀತಿಯಿಂದ ಕಲಾಪ ಮೊಟಕುಗೊಳಿಸಿದ್ದೀರಿ. ಶಾಸಕರು, ಸಂಸದರಿಗೆ ಇರುವ ಕೊರೊನಾ ರಿಸ್ಕ್ ಮಕ್ಕಳಿಗಿಲ್ವಾ, ಮಕ್ಕಳಿಗೆ ಕೊರೊನಾ ಬರಲ್ವಾ. ಶಾಲೆ ಸುರಕ್ಷಿತ ಎಂದಾದರೆ ಕಲಾಪ ನಡೆಸಿ ಮಕ್ಕಳಿಗೆ ಮಾದರಿಯಾಗಬೇಕಿತ್ತು. ಮೊದಲು ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ