ಜಾತಕದಲ್ಲಿ ಕುಜ ರಾಹು ಸಂಧಿ ಇದ್ದಾಗ ಈ ವಸ್ತುಗಳನ್ನು ದಾನ ಮಾಡಿ

Krishnaveni K

ಬುಧವಾರ, 8 ಏಪ್ರಿಲ್ 2026 (11:59 IST)
ಬೆಂಗಳೂರು: ಹೆಚ್ಚಿನವರಿಗೆ ಜಾತಕದಲ್ಲಿ ಕುಜ ರಾಹು ಸಂಧಿಯ ದೋಷಗಳಿರುತ್ತವೆ. ಇದರಿಂದ ಆರೋಗ್ಯ, ಮಾನಸಿಕ ನೆಮ್ಮದಿಗೆ ಭಂಗವಾಗಬಹುದು. ಕುಜ ರಾಹು ದೋಷವಿದ್ದಾಗ ಯಾವ ವಸ್ತುಗಳನ್ನು ದಾನ ಮಾಡಿದರೆ ದೋಷದ ಪರಿಣಾಮ ಕಡಿಮೆಯಾಗಬಹುದು ನೋಡಿ.

ಕುಜ ರಾಹು ಪೈಕಿ ಕುಜನನ್ನು ಆಳುವವನು ಸುಬ್ರಹ್ಮಣ್ಯ ದೇವರು, ರಾಹುವಿಗೆ ದುರ್ಗಾ ದೇವಿ ಅಧಿದೇವತೆ. ಹೀಗಾಗಿ ಈ ದೋಷವಿದ್ದಾಗ ಸುಬ್ರಹ್ಮಣ್ಯನ ದೇವಸ್ಥಾನಕ್ಕೆ ಹೋಗುವುದು, ದುರ್ಗಾ ಸಪ್ತಶತಿ ಪಾರಾಯಣ ಮಾಡಿದಲ್ಲಿ ನೆಮ್ಮದಿ ಸಿಗುವುದು.


ಈ ದೋಷವಿದ್ದಾಗ ಹೆಸರು ಬೇಳೆ, ತಾಮ್ರದ ವಸ್ತು, ಬೆಲ್ಲ, ಗೋಧಿ, ಕಪ್ಪು ಉದ್ದು, ಕಪ್ಪು ಹೊದಿಕೆ,  ಸಾಸಿವೆ ಎಣ್ಣೆ ದಾನ ಮಾಡಬಹುದು. ವಿಶೇಷವಾಗಿ ಮಂಗಳವಾರಗಳಂದು ಈ ದಾನಗಳನ್ನು ಮಾಡಿದರೆ ಶ್ರೇಷ್ಠ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ