ನಿತ್ಯ ಅನಾರೋಗ್ಯ ಸಮಸ್ಯೆಯ ಪರಿಹಾರಕ್ಕೆ ಈ ಒಂದು ವಸ್ತುವನ್ನು ದಾನ ಮಾಡಿ!

ಮಂಗಳವಾರ, 16 ಜನವರಿ 2018 (07:18 IST)
ಬೆಂಗಳೂರು : ಕೆಲವರ ಮನೆಯಲ್ಲಿ ನಿತ್ಯ ಅನಾರೋಗ್ಯ ಭಾದೆ ಕಾಡುತ್ತಿರುತ್ತಲೇ ಇರುತ್ತದೆ. ಮನೆಯಲ್ಲಿ ಪ್ರತಿದಿನ ಒಬ್ಬರಾದ ಮೇಲೆ ಒಬ್ಬರಿಗೆ ಅನಾರೋಗ್ಯ ಸಂಭವಿಸುತ್ತದೆ. ಈ ಅನಾರೋಗ ಎನ್ನುವಂತಹದ್ದು ಪೂರ್ವ ಜನ್ಮದ ಕರ್ಮ. ಪೂರ್ವ ಜನ್ಮದಲ್ಲಿ ಮಾಡಿದ ಒಂದು ದೊಡ್ಡ ದೋಷ ನಮಗೆ ಈ ಜನ್ಮದಲ್ಲಿ ನಿತ್ಯ ಅನಾರೋಗ್ಯ ಭಾದೆಯ ರೂಪದಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ಒಂದು ಅದ್ಭುತವಾದ ಪರಿಹಾರವಿದೆ.

 
ದೇವಸ್ಥಾನದಲ್ಲಿ ಯಾರಾದರೂ ನಿರ್ಗತಿಕರು, ವೃದ್ದರು ಮಲಗಿದ್ದರೆ ಒಂದು ಹೊಸ ಉಣ್ಣೆಯ ಕಂಬಳಿಯನ್ನು ತೆಗೆದುಕೊಂಡು ಹೋಗಿ ಅವರಿಗೆ ತಿಳಿಯದ ಹಾಗೆ ಹೊದಿಸಿ ಬಂದರೆ ಈ ನಿತ್ಯ ಅನಾರೋಗ್ಯ ಸಮಸ್ಯೆ ಪರಿಹಾರವಾಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಮನೆಯಲ್ಲಿರುವವರು ಆರೋಗ್ಯವಂತರಾಗಿರುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ