ದಾರಿದ್ರ್ಯ ಬರಬಾರದು ಎಂದರೆ ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿಯಾಗಲು ಬಿಡಬೇಡಿ

Krishnaveni K

ಭಾನುವಾರ, 14 ಜುಲೈ 2024 (07:56 IST)
ಬೆಂಗಳೂರು: ಮನೆಯಲ್ಲಿ ದಾರಿದ್ರ್ಯ ತೊಲಗಿ ಲಕ್ಷ್ಮೀ ದೇವಿ ಒಲಿಯಲಿ ಎಂದು ಹಲವು ಕಟ್ಟಪಾಡುಗಳನ್ನು ಹಾಕಿಕೊಂಡಿರುತ್ತೇವೆ. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಕೇವಲ ಪೂಜೆ ಮಾಡಿದರೆ ಸಾಲದು. ಅಡುಗೆ ಮನೆಯಲ್ಲಿ ಈ ವಸ್ತುಗಳು ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಬೇಕು.

ನಮ್ಮ ಹಿರಿಯರ ಕಾಲದಿಂದಲೇ ಅಡುಗೆ ಮನೆ ಸಾಮಾಗ್ರಿಗಳು ಇನ್ನು ಸ್ವಲ್ಪ ಬಾಕಿಯಿದೆ ಎನ್ನುವಾಗಲೇ ತರುವ ಸಂಪ್ರದಾಯವಿತ್ತು. ಅದರಲ್ಲೂ ಅಕ್ಕಿ-ಬೇಳೆ ಮುಂತಾದ ಪದಾರ್ಥಗಳನ್ನು ಎಂದೂ ಖಾಲಿಯಾಗಲು ಬಿಡುತ್ತಿರಲಿಲ್ಲ. ಇದರ ಹಿಂದೆ ಶಾಸ್ತ್ರದ ಪ್ರಕಾರ ಕೆಲವೊಂದು ಕಾರಣವೂ ಇದೆ.

ಮನೆಯಲ್ಲಿ ಅಗತ್ಯ ವಸ್ತುಗಳು ಯಾವತ್ತೂ ಇಲ್ಲ ಎನ್ನುವಂತಾಗಬಾರದು ಎಂದು ನಮ್ಮ ಹಿರಿಯರು ಹೇಳುವುದು ಕೇಳಿರುತ್ತೀರಿ. ಅಕ್ಕಿ-ಬೇಳೆ ಧಾನ್ಯ ಲಕ್ಷ್ಮಿಗೆ ಸಮನಾಗಿದ್ದು ಇದು ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳುವುದು ಗೃಹಿಣಿಯ ಕರ್ತವ್ಯ. ಯಾಕೆಂದರೆ ಇವೆರಡೂ ಖಾಲಿಯಾದರೆ ಬಡತನ ಬರುತ್ತಿದೆ ಎಂದರ್ಥ.

ಅದೇ ರೀತಿ ಮನೆಯಲ್ಲಿ ಅರಶಿನ, ಗೋದಿ ಹಿಟ್ಟು, ಅಕ್ಕಿ ಹಿಟ್ಟು ಅಥವಾ ಇತರೆ ಯಾವುದೇ ಹಿಟ್ಟುಗಳು ಖಾಲಿಯಾಗದಂತೆ ನೋಡಿಕೊಳ್ಳಿ. ಇವುಗಳು ಖಾಲಿಯಾದರೆ ಬಡತನ ಇನ್ನೇನು ಹತ್ತಿರದಲ್ಲೇ ಇದೆ ಎಂದರ್ಥ. ಮನೆಯಲ್ಲಿ ಅಕ್ಕಿ ಮುಗಿದರೆ ಸಮೃದ್ಧಿ, ಶಾಂತಿ ಹಾಳಾಗುತ್ತದೆ. ಉಪ್ಪು ಖಾಲಿಯಾದರೆ ರಾಹು ದೋಷ ಉಂಟಾಗುತ್ತದೆ.  ಇಂತಹ ಸಾಮಗ್ರಿಗಳು ಖಾಲಿಯಾದರೆ ಅದೃಷ್ಟ, ಸಮೃದ್ಧಿ ಜೊತೆಗೆ ಸುಖವೂ ನಾಶವಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ