ಇನ್ನೊಬ್ಬರಿಗೆ ಬಟ್ಟೆ ದಾನ ಮಾಡುವ ಮೊದಲು ಈ ವಿಚಾರ ನೆನಪಿರಲಿ

Krishnaveni K

ಶನಿವಾರ, 13 ಜುಲೈ 2024 (08:45 IST)
ಬೆಂಗಳೂರು: ದಾನ ಮಾಡುವುದು ಅತ್ಯಂತ ಶ್ರೇಷ್ಠ ಕೆಲಸ. ಅದರಲ್ಲೂ ನಿಮ್ಮಲ್ಲಿರುವ ಬಟ್ಟೆಯನ್ನು ಬಡವರಿಗೆ ದಾನ ಮಾಡಿದರೆ ಅದರಿಂದ ಅವರಿಗೆ ಅನುಕೂಲವಾಗುತ್ತದೆ. ಬಟ್ಟೆ ದಾನ ಮಾಡುವ ಮೊದಲು ಕೆಲವು ವಿಚಾರಗಳನ್ನು ನೀವು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.

ದಾನ ಮಾಡುವುದು ಉತ್ತಮ ಕೆಲಸವೇ. ಆದರೆ ಅದನ್ನು ಸರಿಯಾದ ರೀತಿಯಲ್ಲಿ, ಸಮಯದಲ್ಲಿ ಮಾಡುವುದು ಅಷ್ಟೇ ಮುಖ್ಯ. ನಿಮ್ಮ ಬಟ್ಟೆಯನ್ನು ಇತರರಿಗೆ ದಾನ ಮಾಡುವಾಗ ಕೆಲವೊಂದು ತಪ್ಪು ಮಾಡಿದರೆ ಅದರಿಂದ ನಿಮಗೆ ಒಳಿತಲ್ಲ, ಕೆಡುಕಾಗುವ ಸಂಭವವೇ ಹೆಚ್ಚು ಎನ್ನುತ್ತದೆ ಶಾಸ್ತ್ರ. ಹಾಗಿದ್ದರೆ ಅದೇನು ಎಂದು ನೋಡೋಣ.

ಒಂದು ವೇಳೆ ನೀವು ಬಳಸಿದ ಬಟ್ಟೆಯನ್ನು ಇನ್ನೊಬ್ಬರಿಗೆ ದಾನ ಮಾಡುವುದಿದ್ದರೆ ಅದನ್ನು ತೊಳೆದು ಶುದ್ಧ ಮಾಡಿ ಕೊಡಿ. ತೊಳೆಯದ ಬಟ್ಟೆಯನ್ನು ದಾನ ಮಾಡುವುದರಿಂದ ನಿಮ್ಮಿಬ್ಬರ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳು ಪರಸ್ಪರ ಟ್ರಾನ್ಫರ್ ಆಗುವ ಸಾಧ್ಯತೆಗಳಿವೆ.

ಉದಾಹರಣೆಗೆ ನಿಮಗಿರುವ ಸಂಕಟಗಳು, ರೋಗಗಳು ನೀವು ಬಟ್ಟೆ ದಾನವಾಗಿ ನೀಡುವ ವ್ಯಕ್ತಿಗೆ ವರ್ಗಾವಣೆಯಾಗಬಹುದು. ದಾನ ಮಾಡುವಾಗ ತೆಗೆದುಕೊಳ್ಳುವವನಿಗೆ ಯಾವುದೇ ಕೆಡುಕಾಗದಂತೆ ಶುದ್ಧ ಮನಸ್ಸಿನಿಂದ ನೀಡುವುದು ತುಂಬಾ ಮುಖ್ಯ. ಆಗಲೇ ದಾನದ ಫಲ ನಮಗೆ ಸಿಗುವುದು ಎನ್ನುತ್ತದೆ ಶಾಸ್ತ್ರ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ