Durga Devi Mantra: ಉತ್ತಮ ಆರೋಗ್ಯಕ್ಕಾಗಿ ಈ ದುರ್ಗಾ ಮಂತ್ರ ಪಠಿಸಿ

Krishnaveni K

ಮಂಗಳವಾರ, 3 ಡಿಸೆಂಬರ್ 2024 (08:40 IST)
ಬೆಂಗಳೂರು: ಇಂದು ಮಂಗಳವಾರವಾಗಿದ್ದು ದುರ್ಗಾದೇವಿಗೆ ವಿಶೇಷವಾದ ದಿನವಾಗಿದೆ. ಈ ದಿನ ದುರ್ಗಾ ದೇವಿಯ ಈ ಮಂತ್ರವನ್ನು ಪಠಿಸಿದರೆ ನಿಮಗೆ ಆರೋಗ್ಯ, ಆಯುಷ್ಯ ವೃದ್ಧಿಯಾಗುತ್ತದೆ. ಯಾವ ಮಂತ್ರ ಇಲ್ಲಿ ನೋಡಿ.

ದುರ್ಗಾ ದೇವಿಯು ದುಷ್ಟ ಶಕ್ತಿಯನ್ನು ಹೋಗಲಾಡಿಸಿ ನಮ್ಮ ಜೀವನದಲ್ಲಿ ಸುಖ ಸಮೃದ್ಧಿಯನ್ನು ತರುವ ಮಾತೆಯಾಗಿದ್ದಾಳೆ. ಆಕೆಯ ಕರುಣಾ ದೃಷ್ಟಿಯಿದ್ದರೆ ಜೀವನದಲ್ಲಿ ಆರೋಗ್ಯ, ಆಯುಷ್ಯ, ಯಶಸ್ಸು, ಕೀರ್ತಿ ಎಲ್ಲವೂ ತಾನಾಗಿಯೇ ಬರುತ್ತದೆ. ಅದಕ್ಕಾಗಿ ದುರ್ಗಾ ದೇವಿಯ ಈ ಮಂತ್ರವನ್ನು ಪಠಿಸುವುದು ಮುಖ್ಯವಾಗಿದೆ.

ದೇಹಿ ಸೌಭಾಗ್ಯಂ ಆರೋಗ್ಯಂ ದೇಹಿ ಮೇ ಪರಮಂ ಸುಖಮ್
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋಜಹಿ

ಈ ಮಂತ್ರವನ್ನು ಪ್ರತಿನಿತ್ಯ ಪಠಿಸುತ್ತಿದ್ದರೆ ಆರೋಗ್ಯ, ಸೌಭಾಗ್ಯ, ನೆಮ್ಮದಿ, ಯಶಸ್ಸು ನಿಮ್ಮದಾಗುತ್ತದೆ. ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕವಾಗಿ ಚಿಂತೆ, ಖಿನ್ನತೆ ಇತ್ಯಾದಿ ಸಮಸ್ಯೆಗಳಿದ್ದರೂ ಈ ಮಂತ್ರವನ್ನು ತಪ್ಪದೇ ಪ್ರತಿನಿತ್ಯ ಪಠಿಸುವುದು ಉತ್ತಮ. ಇದರಿಂದ ದುರ್ಗಾ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಈ ಮಂತ್ರವನ್ನು ದುರ್ಗಾ ಸಪ್ತಶತಿಯಿಂದ ಪಡೆಯಲಾಗಿದ್ದು, ದುರ್ಗಾ ದೇವಿಯ ಪವರ್ ಫುಲ್ ಮಂತ್ರವಾಗಿದೆ.

ಇದಲ್ಲದೆ, ಆರೋಗ್ಯಕ್ಕಾಗಿ ದುರ್ಗಾ ದೇವಿಯನ್ನು ಕುರಿತು ಈ ಮಂತ್ರವನ್ನೂ ಪಠಿಸಬಹುದು. ಅದು ಹೀಗಿದೆ:

ಓಂ ದುರ್ಗಾ ದೇವಿಯೇ ನಮಃ
ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಜಪಿಸುತ್ತಿದ್ದರೆ ದುರ್ಗಾ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ದುರ್ಗಾ ದೇವಿ ಇಡೀ ಲೋಕಕ್ಕೇ ತಾಯಿ. ಆಕೆಯ ಅನುಗ್ರಹವಿದ್ದರೆ ದೇವಾನುದೇವತೆಗಳಿಗೂ ಜಯ ಶತಃಸಿದ್ಧವಂತೆ. ಇಂತಹ ದುರ್ಗಾದೇವಿಯನ್ನು ಆರಾಧಿಸಿದರೆ ಜೀವನದಲ್ಲಿ ಉನ್ನತಿ ಖಂಡಿತಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ