ಕಾರ್ತಿಕ ಮಾಸ ಎಂಬುದು ಮಹಾವಿಷ್ಣುವಿಗೆ ಸಮರ್ಪಿತವಾದ ಮಾಸವಾಗಿದೆ. ಈ ಮಾಸದಲ್ಲಿ ಮಹಾವಿಷ್ಣುವಿನ ಜೊತೆಗೆ ಶಿವ, ತುಳಸಿಯನ್ನು ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾಗಿದೆ. ಕಾರ್ತಿಕ ಮಾಸದ್ಲಿ ಪುಣ್ಯ ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಪವಿತ್ರ ಕೆಲಸವಾಗಿದೆ.
ಕಾರ್ತಿಕ ಮಾಸದಲ್ಲಿ ಅಗತ್ಯವಿರುವವರಿಗೆ ಬಟ್ಟೆ ದಾನ ಮಾಡುವುದು, ಬಡವರಿಗೆ ಹಣ್ಣು, ಹಂಪಲುಗಳನ್ನು ನೀಡುವುದು, ಗೋ ಶಾಲೆಗಳಲ್ಲಿ ಹಸುವಿನ ಸೇವೆ ಮಾಡುವುದು ಅಥವಾ ಗೋ ಗ್ರಾಸ ನೀಡುವುದು, ತುಳಸಿ, ನೆಲ್ಲಿಕಾಯಿ, ಧಾನ್ಯಗಳನ್ನು ದಾನ ಮಾಡುವುದು, ದೇವಾಲಯದಲ್ಲಿ ದೀಪ ಹಚ್ಚುವುದು, ಮಹಾವಿಷ್ಣುವನ್ನು ಮುಂಜಾನೆ ಮತ್ತು ಸಂಜೆ ಪೂಜೆ ಮಾಡುವುದರಿಂದ ಮೋಕ್ಷ ಪಡೆದುಕೊಳ್ಳಬಹುದು ಎಂಬ ನಂಬಿಕೆಯಿದೆ.