ಗೃಹ ಪ್ರವೇಶ ಮಾಡುವ ಮೊದಲು ಈ ಶಾಸ್ತ್ರಗಳನ್ನು ತಪ್ಪದೇ ಮಾಡಿ
ಗುರುವಾರ, 24 ಡಿಸೆಂಬರ್ 2020 (06:28 IST)
ಬೆಂಗಳೂರು : ಸುಖ, ಶಾಂತಿ, ನೆಮ್ಮದಿಯ ಜೀವನ ಸಾಗಿಸಲು ಮನೆ ನಿರ್ಮಿಸುತ್ತಾರೆ. ಆದರೆ ಮನೆಯನ್ನು ನಿರ್ಮಿಸುವುದು ಮಾತ್ರವಲ್ಲ ಗೃಹ ಪ್ರವೇಶ ಕೂಡ ಶಾಸ್ತ್ರದ ಪ್ರಕಾರ ಮಾಡಿದರೆ ಮಾತ್ರ ಆ ಮನೆಯಲ್ಲಿ ನೀವು ನೆಮ್ಮದಿಯ ಜೀವನ ನಡೆಸಬಹುದು. ಹಾಗಾಗಿ ಗೃಹಪ್ರವೇಶವನ್ನು ಶಾಸ್ತ್ರದ ಪ್ರಕಾರ ಮಾಡಿ.
ಗೃಹ ಪ್ರವೇಶದಂದು ಮನೆಯ ಸದಸ್ಯರು ಸ್ನಾನಾಧಿಗಳನ್ನು ಮಾಡಿಕೊಂಡು ಪವಿತ್ರವಾದ ಬಟ್ಟೆ, ಆಭರಣಗಳನ್ನು ಧರಿಸಿ ಪುರೋಹಿತರೊಂದಿಗೆ ಗೃಹ ಪ್ರವೇಶ ಮಾಡಬೇಕು. ಗೃಹ ಪ್ರವೇಶವನ್ನು ಶುಭ ಮುಹೂರ್ತವನ್ನು ಮಾಡಬೇಕು. ಮನೆಯನ್ನು ಹೂಗಳು, ನಾಣ್ಯಗಳಿಂದ ಅಲಂಕರಿಸಬೇಕು. ಮನೆಯ ಬಾಗಿಲನ್ನು ಬಟ್ಟೆಗಳಿಂದ ಮುಚ್ಚಬೇಕು. ಬಳಿಕ ಪ್ರವೇಶ ಬಾಗಿಲಿಗೆ ಮನೆಯ ಗೃಹಿಣಿ ಪೂಜೆ ಮಾಡಬೇಕು. ಆ ವೇಳೆ ದಿಕ್ಪಾಲಕರನ್ನು, ಕ್ಷೇತ್ರಪಾಲ ಹಾಗೂ ಗ್ರಾಮದೇವತೆಯನ್ನು ಪೂಜಿಸಬೇಕು. ಬಳಿಕ ಮನೆ ಪ್ರವೇಶ ಮಾಡಬೇಕು.