ದೇವರ ಪೂಜೆ ಮಾಡುವಾಗ ಈ ನಿಯಮ ತಪ್ಪದೇ ಪಾಲಿಸಿ

ಗುರುವಾರ, 26 ಸೆಪ್ಟಂಬರ್ 2019 (07:00 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ಮಾಡುತ್ತಾರೆ. ನಮ್ಮ ಆರೋಗ್ಯದ ಜೊತೆಗೆ ಸುಖ, ಶಾಂತಿ, ಆಯಸ್ಸು ಹೆಚ್ಚಾಗಲಿ ಎಂದು ಪೂಜೆಯನ್ನು ಮಾಡುತ್ತೇವೆ. ಆದರೆ ಈ ದೇವರ ಪೂಜೆ ಮಾಡಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಬೆಕಾಗುತ್ತದೆ.




ಪ್ರತಿದಿನ ಪೂಜೆ ಮಾಡುವ ಸಮಯದಲ್ಲಿ ಪಂಚ ದೇವತೆಗಳಾದ ಸೂರ್ಯ, ಗಣೇಶ, ದುರ್ಗಾ, ಶಿವ ಮತ್ತು ವಿಷ್ಣು ದೇವತೆಗಳನ್ನು ತಪ್ಪದೇ ನೆನೆಯಬೇಕು.ಇದರಿಂದ ಸಂತೋಷ ಮತ್ತು ಸಮೃದ್ಧಿ ನಮ್ಮದಾಗುತ್ತದೆ. ದೇವಿ ದುರ್ಗೆಗೆ ದರ್ಭೆಯನ್ನು ಹಾಕಬಾರದು. ತುಳಸಿ ಹಾರವನ್ನು ಶಿವ, ಗಣೇಶ ಮತ್ತು ಭೈರವನಿಗೆ ಎಂದು ಹಾಕಬಾರದು.ಗಣೇಶನಿಗೆ ದರ್ಭೆಯನ್ನು ಅರ್ಪಿಸಬೇಕು. ಶಂಖದ ನೀರನ್ನು ಸೂರ್ಯ ದೇವರಿಗೆ  ಅರ್ಪಿಸಬಾರದು. ತುಳಸಿ ಗಿಡವನ್ನು ಸ್ನಾನ ಮಾಡದೇ ಮುಟ್ಟಬಾರದು.


ಶಾಸ್ತ್ರದ ಪ್ರಕಾರ ಎಂದು ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಬಾರದು. ಹೀಗೆ ದೀಪ ಹಚ್ಚಿದ ವ್ಯಕ್ತಿ ರೋಗಿಷ್ಟನಾಗ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಬುಧವಾರ ಮತ್ತು ಭಾನುವಾರ ಅಶ್ವತ್ಥ ಮರಕ್ಕೆ ನೀರನ್ನು ಮರೆತು ಹಾಕಬಾರದು. ದೇವರ ಪೂಜೆ ಮಾಡಬೇಕಾದರೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ