ಗರ್ಭಿಣಿಯರು ಗ್ರೀನ್ ಟೀ ಸೇವನೆ ಮಾಡಬಹುದೇ ಅಥವಾ ಬೇಡವೆ? ಇಲ್ಲಿದೆ ಉತ್ತರ
ಭಾನುವಾರ, 6 ಮೇ 2018 (07:10 IST)
ಬೆಂಗಳೂರು : ಇತ್ತೀಚೆಗೆ ಹೆಚ್ಚಿನವರು ಫಿಟ್ನೆಸ್ ಕಾಪಾಡಲು ಗ್ರೀನ್ ಟೀ ಕುಡಿಯುತ್ತಾರೆ. ಈ ಗ್ರೀನ್ ಟೀ ಸೇವನೆ ಮಾಡಿದರೆ ಹೊಟ್ಟೆಯ ಫ್ಯಾಟ್ ಕಡಿಮೆಯಾಗುತ್ತದೆ. ಹಾಗೇ ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನೂ ನಿಯಂತ್ರಣದಲ್ಲಿರಿಸಲು ಸಹಕರಿಸುತ್ತದೆ. ಆದರೆ ಇದನ್ನು ಗರ್ಭಿಣೆಯರು ಗ್ರೀನ್ ಟೀ ಸೇವನೆ ಮಾಡಬಹುದೇ ಅಥವಾ ಬೇಡವೆ ಎಂಬ ಗೊಂದಲ ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಗರ್ಭಿಣಿಯಾಗಿರುವಾಗ ಲಿಮಿಟೆಡ್ ಪ್ರಮಾಣದಲ್ಲಿ ಗ್ರೀನ್ ಟೀ ಸೇವನೆ ಮಾಡಿದರೆ ಯಾವುದೆ ಸಮಸ್ಯೆ ಕಾಣಿಸುವುದಿಲ್ಲ. ಯಾಕೆಂದರೆ ಗ್ರೀನ್ ಟೀಯಲ್ಲಿ ಕೆಫೆನ್ ಇರುವುದರಿಂದ ಅದನ್ನು ಪ್ರೆಗ್ನೆನ್ಸಿ ಸಮಯದಲ್ಲಿ ಕಡಿಮೆ ಸೇವನೆ ಮಾಡಬೇಕು. 100 ಗ್ರಾಂ ಗ್ರೀನ್ ಟೀಯಲ್ಲಿ 17 ಮಿಲಿ ಗ್ರಾಂ ಕೆಫೆನ್ ಇರುತ್ತದೆ. ಆದುದರಿಂದ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ.
ಪ್ರೆಗ್ನೆನ್ಸಿ ಸಮಯದಲ್ಲಿ ಸುಮಾರು 200 ಮಿಲಿಗ್ರಾಂನಷ್ಟು ಕೆಫೆನ್ ಸೇಔನೆ ಮಾಡಬಹುದು. ಆದರೆ ಅದಕ್ಕಿಂತ ಹೆಚ್ಚು ಸೇವನೆ ಮಾಡಬೇಡಿ. ಇದರಿಂದ ಹುಟ್ಟಲಿರುವ ಮಗು ಹಾಗೂ ನಿಮ್ಮ ಮೇಲೆ ಪ್ರಭಾವ ಬೀಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ