ಇಂದು ಹನುಮಂತನಿಗೆ ಈ ವಸ್ತುಗಳನ್ನು ಅರ್ಪಿಸಿದರೆ ಆಂಜನೇಯನ ಆಶೀರ್ವಾದ ಸಿಗುತ್ತದೆ

Krishnaveni K

ಮಂಗಳವಾರ, 20 ಆಗಸ್ಟ್ 2024 (08:46 IST)
ಬೆಂಗಳೂರು: ಇಂದು ಮಂಗಳವಾರವಾಗಿದ್ದು ರಾಮನ ಬಂಟ ಆಂಜನೇಯ ಸ್ವಾಮಿಯ ದಿನವಾಗಿದೆ. ಈ ದಿನ ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿ ಕೆಲವು ವಸ್ತುಗಳನ್ನು ಅರ್ಪಿಸಿದರೆ ಅವನ ಆಶೀರ್ವಾದ ಸಿಗುವುದು.

ಆಂಜನೇಯ ಸ್ವಾಮಿ ಎಂದರೆ ಭಕ್ತಿಗೆ ಇನ್ನೊಂದು ಹೆಸರು. ಆತನ ಸ್ವಾಮಿ ನಿಷ್ಠೆ, ಭಕ್ತಿಗೆ ಸರಿಸಾಟಿಯಾಗಿರುವುದು ಇನ್ನೊಂದಿಲ್ಲ. ಆಂಜನೇಯ ಸ್ವಾಮಿ ಆಹಾರ ಪ್ರಿಯ ಕೂಡಾ. ವಾನರರು ಕಾಡಿನಲ್ಲಿ ಸಿಗುವ ಹಣ್ಣು-ಹಂಪಲುಗಳನ್ನು ಇಷ್ಟಪಡುತ್ತವೆ. ಅದೇ ರೀತಿ ಆಂಜನೇಯ ಸ್ವಾಮಿಗೂ ಹಣ್ಣು ಹಂಪಲುಗಳೆಂದರೆ ಬಲು ಇಷ್ಟ.

ಅದರಲ್ಲೂ ವಿಶೇಷವಾಗಿ ಬಾಳೆ ಹಣ್ಣು, ತೆಂಗಿನಕಾಯಿ, ವೀಳ್ಯದೆಲೆಯನ್ನು ಅರ್ಪಿಸಿದರೆ ಅತ್ಯಂತ ಸಂಪ್ರೀತನಾಗುತ್ತಾನೆ. ಇದಲ್ಲದೆ, ಸಿಂಧೂರವೆಂದರೆ ಆಂಜನೇಯನಿಗೆ ಬಲು ಪ್ರಿಯ. ಇದಲ್ಲದೆ ವೀಳ್ಯದ ಹಾರ, ಕೆಂಪು ಬಣ್ಣದ ಹೂವುಗಳಿಂದ ಹನುಮಂತನನ್ನು ಅಲಂಕರಿಸಿದರೆ ಆತ ಪ್ರಸನ್ನನಾಗುತ್ತಾನೆ.

 ಬರೀ ಇಷ್ಟು ಮಾತ್ರವಲ್ಲದೆ, ಮಂಗಳವಾರದಂದು ಹನುಮಾನ್ ಚಾಲೀಸಾ ಪಠಣ ಮಾಡುವುದು ಮತ್ತು ರಾಮಾಯಣದ ಸುಂದರ ಕಾಂಡದ ಪಾರಾಯಣ ಮಾಡುವುದರಿಂದ ಹನುಮಂತನ ಆಶೀರ್ವಾದ ಸಿಗುತ್ತದೆ. ಅಲ್ಲದೆ ಇಂದು ಮಂಗಗಳಿಗೆ ಆಹಾರ ನೀಡುವುದು ಅತ್ಯಂತ ಶ್ರೇಯಸ್ಕರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ