ತ್ವಮೇವ ಮಾತಾ ಚ ಪಿತಾ ತ್ವಮೇವ ತ್ವಮೇವ ಬಂಧುಶ್ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ ತ್ವಮೇವ ಸರ್ವ ಮಮ ದೇವ ದೇವ
ನನ್ನ ತಂದೆ-ತಾಯಿ, ಬಂಧು-ಬಳಗ, ಮಿತ್ರ ಎಲ್ಲವೂ ನೀನೇ ಭಗವಂತ ಎಂಬುದು ಈ ಮಂತ್ರದ ಸಾರವಾಗಿದೆ. ಇದನ್ನು ಪ್ರತಿನಿತ್ಯ ಪಠಿಸುವುದರಿಂದ ಮಾನಸಿಕ ಸ್ಥಿರತೆ, ನೆಮ್ಮದಿ, ಸಂಬಂಧಗಳಲ್ಲಿ ಸ್ಥಿರತೆ ಮೂಡುವುದು.
ಓ ನಮೋ ನಾರಾಯಣಾಯ
ಮಹಾವಿಷ್ಣುವಿನ ಮೂಲ ಮಂತ್ರ ಇದೇ ಆಗಿದೆ. ನಾನು ಸರ್ವಶಕ್ತನಾದ ಮಹಾವಿಷ್ಣುವಿಗೆ ವಂದಿಸುತ್ತೇನೆ ಎಂಬುದು ಇದರ ಅರ್ಥವಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ನಮ್ಮ ಮರಣಾನಂತರ ನಮ್ಮ ಆತ್ಮವು ಮಹಾವಿಷ್ಣುವಿನ ಮೂಲ ಸ್ಥಾನಕ್ಕೆ ಹೋಗುತ್ತದೆ ಎಂಬ ನಂಬಿಕೆಯಿದೆ. ಅಂದರೆ ಮೋಕ್ಷ ಪ್ರಾಪ್ತಿಯಾಗುವುದು ಎಂದಾಗಿದೆ. ಈ ಮಂತ್ರವನ್ನು ಪಠಿಸುವುದರ ಮೂಲಕ ನಮ್ಮನ್ನು ಭೌತಿಕ ಬಯಕೆಗಳಿಂದ ಮುಕ್ತಗೊಳಿಸಬಹುದಾಗಿದೆ.