ಹನುಮಂತನ ಫೋಟೋ ಮನೆಯ ಈ ಭಾಗದಲ್ಲಿ ಇಟ್ಟರೆ ಉತ್ತಮ

ಸೋಮವಾರ, 25 ಜೂನ್ 2018 (11:47 IST)
ಬೆಂಗಳೂರು : ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ಯಾವುದೇ ದೇವಾನುದೇವತೆಗಳ ಫೋಟೋ ಹಾಕಿದ್ರೆ ಮನೆಯಲ್ಲಿರುವ ಅನೇಕ ಸಮಸ್ಯೆಗಳು ನಿವಾರಣೆಯಾಗಲಿವೆ. ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ. ಅದರಲ್ಲೂ ಹನುಮಂತನ ಪ್ರತಿಮೆ ಹಾಗೂ ಫೋಟೋಗಳನ್ನು ಹಾಕುವುದರಿಂದ ಸಾಕಷ್ಟು ಲಾಭಗಳಿವೆ. ಆದ್ರೆ ಎಲ್ಲೆಂದರಲ್ಲಿ ಹನುಮಂತನ ಫೋಟೋ ಹಾಕಬಾರದು.


ಯಾವುದೇ ಕಾರಣಕ್ಕೂ ಹನುಮಂತನ ಮೂರ್ತಿ ಅಥವಾ ಫೋಟೋವನ್ನು ಬೆಡ್ ರೂಂನಲ್ಲಿ ಹಾಕಬೇಡಿ. ಮನೆಯ ಪವಿತ್ರ ಜಾಗ ಅಥವಾ ದೇವರ ಕೋಣೆಯಲ್ಲಿ ಮಾತ್ರ ಹನುಮಂತನ ಫೋಟೋ ಇರಲಿ.

ವಾಸ್ತುಶಾಸ್ತ್ರದ ಪ್ರಕಾರ, ಹನುಮಂತನ ಮುಖ ದಕ್ಷಿಣ ದಿಕ್ಕಿಗೆ ಬರುವಂತೆ ಇಡಿ. ಯಾಕೆಂದ್ರೆ ಹನುಮಂತ ತನ್ನ ಶಕ್ತಿಯನ್ನು ದಕ್ಷಿಣ ದಿಕ್ಕಿಗೆ ಪ್ರಯೋಗ ಮಾಡಿದ್ದ. ದಕ್ಷಿಣ ದಿಕ್ಕಿಗೆ ಫೋಟೋ ಹಾಕುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಅಂಶಗಳ ಶಕ್ತಿ ಕಡಿಮೆಯಾಗುತ್ತದೆ. ಸುಖ-ಶಾಂತಿ ನೆಲೆಸಿರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ