ದೇವರಿಗೆ ಹರಕೆ ಹೊತ್ತು ತೀರಿಸದೇ ಇದ್ದಲ್ಲಿ ಏನಾಗುತ್ತದೆ ಎಂಬುದು ಇಲ್ಲಿದೆ ನೋಡಿ
ಗುರುವಾರ, 26 ಏಪ್ರಿಲ್ 2018 (06:08 IST)
ಬೆಂಗಳೂರು : ಮನುಷ್ಯನಿಗೆ ಕಷ್ಟ ಅಥವಾ ಸುಖ ಯಾವುದೇ ಬಂದರೂ ದೇವರನ್ನು ನೆನೆಪಿಸಿಕೊಳ್ಳುತ್ತಾನೆ. ಸುಖ ಬಂದಾಗ ಎಂಜಾಯ್ ಮೆಂಟ್ ಎಂಬ ಆಯ್ಕೆ ಇರುತ್ತದೆ. ಆದರೆ, ಕಷ್ಟ ಬಂದಾಗ ಮಾತ್ರ ತಪ್ಪದೇ ದೇವರು ನೆನೆಪಿಗೆ ಬಂದೇ ಬರುತ್ತಾನೆ. ತಕ್ಷಣ ದೇವಸ್ಥಾನಕ್ಕೆ ಹೋಗಿ ಕಷ್ಟಗಳು ನಿವಾರಣೆಯಾದರೆ ದೇವಾಲಯಕ್ಕೆ ಬರುತ್ತೇನೆಂದು ಅಥವಾ ಹಣ, ಇನ್ನಿತರೆ ವಸ್ತುಗಳನ್ನು ಸಲ್ಲಿಸುತ್ತೇನೆಂದು ಹರಕೆ ಹೊರುತ್ತೇವೆ.
ಕಷ್ಟಗಳು ನಿವಾರಣೆ ಯಾದನಂತರ ತಾವು ಹೊತ್ತ ಹರಕೆಯನ್ನು ಮರೆಯುತ್ತಾರೆ. ಹೀಗೆ ಮಾಡಿದರೆ. ದೇವರು ಶಿಕ್ಷಿಸುತ್ತಾನೆಂದು ಕೆಲವರು ಹೇಳಿದರೆ, ಇನ್ನು ಕೆಲವರು ಏನೂ ಆಗುವುದಿಲ್ಲವೆನ್ನುತ್ತಾರೆ. ಅಸಲಿಗೆ ಹರಕೆ ಹೊತ್ತು ನಂತರದ ದಿನಗಳಲ್ಲಿ ತೀರಿಸದೆ ಹೋದರೆ,ಏನಾಗುತ್ತದೆಂದು ನೋಡೋಣ ಬನ್ನಿ
ತಾಯಿ ತನ್ನ ಮಗುವನ್ನು ಎಂದಿಗೂ ಶಿಕ್ಷಿಸುವುದಿಲ್ಲ ವಲ್ಲವೇ. ಅದೇ ರೀತಿ ದೇವರೂ ಸಹ ತನ್ನ ಭಕ್ತರನ್ನು ಶಿಕ್ಷಿಸುವುದಿಲ್ಲ. ಕಷ್ಟಗಳು ಎದುರಾದಾಗ ಸಹಜವಾಗಿಯೇ ಭಕ್ತರು ದೇವರಿಗೆ ಹರಕೆ ಹೊರುತ್ತಾರೆ. ತಮ್ಮ ಕಷ್ಟಗಳು ತೀರಿದ ನಂತರ ಹರಕೆಯನ್ನು ತೀರಿಸದಿದ್ದಲ್ಲಿ, ದೇವರು ಶಿಕ್ಷೆಯನ್ನು ಕೊಡುವುದಿಲ್ಲ. ಮತ್ತೊಮ್ಮೆ ಕಷ್ಟಗಳು ಎದುರಾದಾಗ ತನ್ನ ಬಳಿಗೆ ಕರೆಯಿಸಿಕೊಳ್ಳುತ್ತಾನೆ. ಹಿಂದೆ ಕಷ್ಟಬಂದಾಗ ಹರಕೆ ಹೊತ್ತಿರುವುದನ್ನು ನೆನಪಿಸುತ್ತಾನೆ. ಆದುದರಿಂದ ಯಾರೇ ಆಗಲಿ ತಮ್ಮ ಕಷ್ಟಕಾಲದಲ್ಲಿ ದೇವರಿಗೆ ಹರಕೆ ಹೊತ್ತಿಕೊಂಡಿದ್ದಲ್ಲಿ, ನಿರ್ಲಕ್ಷಿಸದೆ, ಹರಕೆಯನ್ನು ತೀರಿಸುವುದು ಒಳಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ