ಧನ ಪ್ರಾಪ್ತಿಯಾಗಲು ಈ ಮಾಲೆಯನ್ನು ಕೈಯಲ್ಲಿ ಹಿಡಿದು ಜಪಿಸಿ

ಬುಧವಾರ, 8 ಮೇ 2019 (09:30 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ದೇವರನ್ನು ಪ್ರಾರ್ಥಿಸುವಾಗ ಮಾಲೆಯನ್ನು ಕೈಯಲ್ಲಿ ಹಿಡಿದು ಮಂತ್ರ ಜಪಿಸುತ್ತಾರೆ. ಮಾಲೆಗಳನ್ನು ಹಿಡಿದು ದೇವರನ್ನು ಪ್ರಾರ್ಥಿಸುವುದರಿಂದ ದೇಹಕ್ಕೂ ಹಾಗೂ ಮನಸ್ಸಿಗೆ ಒಳ್ಳೆಯದು ಎಂದು ಹೇಳುತ್ತಾರೆ. ಈ ಮಾಲೆಗಳ ಮಹತ್ವ ಏನು ಎಂಬುದನ್ನು ತಿಳಿದುಕೊಳ್ಳೋಣ.




ರುದ್ರಾಕ್ಷಿ: ಈ ಮಾಲೆಯನ್ನು ಹಿಡಿದು ಎಲ್ಲಾ ಮಂತ್ರಗಳನ್ನೂ ಸುಲಭವಾಗಿ ಜಪಿಸಬಹುದು. ಇನ್ನು ಶಿವನಿಗೆ ರುದ್ರಾಕ್ಷಿ ಪ್ರಿಯ. ಆದುದರಿಂದ ಮಹಾಮೃತ್ಯುಂಜಯ ಮಂತ್ರ ಜಪಿಸಲು ರುದ್ರಾಕ್ಷಿ ಮಾಲೆ ಬಳಸಲಾಗುತ್ತದೆ. ಜತೆಗೆ ಬೇರೆ ದೇವರ ಮಂತ್ರವನ್ನೂ ಈ ಮಾಲೆ ಬಳಸಿ ಪಠಿಸಬಹುದು.


ಸ್ಫಟಿಕ: ಸ್ಪಟಿಕ ಮಾಲೆ ಹಿಡಿದು ಜಪಿಸುವುದರಿಂದ ಧನ ಪ್ರಾಪ್ತಿಯಾಗುತ್ತದೆ. ಜೊತೆಗೆ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಲಕ್ಷ್ಮಿ ದೇವಿಯನ್ನು ಜಪಿಸಲು ಈ ಮಾಲೆ ಬಳಸಲಾಗುತ್ತದೆ. ಅಧಿಕ ರಕ್ತದೊತ್ತಡ ಇರವವರು ಈ ಮಾಲೆ ಬಳಸಬೇಕು.


ಹಳದಿ: ಹಳದಿ ಬಣ್ಣದ ಮಾಲೆ ಹಿಡಿದು ಜಪಿಸಿದರೆ ಮನಸ್ಸಿನ ಇಚ್ಛೆ ಪೂರ್ತಿಯಾಗುತ್ತದೆ. ಬೃಹಸ್ಪತಿ ಮತ್ತು ಬಾಗಲಾಮುಖಿ ದೇವಿ ಮಂತ್ರ ಜಪಿಸುವಾಗಲೂ ಈ ಮಾಲೆ ಬಳಸಬೇಕು. ಹಳದಿ ಮಾಲೆಯಿಂದ ವಿದ್ಯೆ, ಸಂತಾನ ಮತ್ತು ಜ್ಞಾನ ಪ್ರಾಪ್ತಿಯಾಗುತ್ತದೆ.


ಚಂದನ: ದುರ್ಗಾ ದೇವಿಯ ಮಂತ್ರ ಜಪಿಸಲು ಕೆಂಪು ಚಂದನ ಹಾಗೂ ಕೃಷ್ಣಾ ಮಂತ್ರ ಜಪಿಸಲು ಬಿಳಿ ಚಂದನ ಬಳಸುತ್ತಾರೆ.
ತುಳಸಿ : ತುಳಸಿ ಮಾಲೆ ದೇವಿ ಮತ್ತು ಶಿವನ ಮಂತ್ರ ಜಪಿಸಲು ಬಳಕೆಯಾಗುತ್ತದೆ. ತುಳಸಿ ಮಾಲೆ ಧರಿಸಿದರೆ ಜೀವನ ಸುಖಮಯವಾಗುತ್ತದೆ ಎಂಬ ನಂಬಿಕೆ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ