Horoscope 2025: ತುಲಾ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಯಾವ ಫಲ

Krishnaveni K

ಮಂಗಳವಾರ, 26 ನವೆಂಬರ್ 2024 (08:43 IST)
ಬೆಂಗಳೂರು: ತುಲಾ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು. ಕುಟುಂಬದವರ ಸಂಕಷ್ಟಗಳಿಗೆ ನೀವೇ ಬಂಡೆಯಂತೆ ನಿಲ್ಲುವ ವರ್ಷವಾಗಿದೆ.

ತುಲಾ ರಾಶಿಯವರು ಭಾವನಾತ್ಮಕ ಮತ್ತು ಕೌಟುಂಬಿಕ ಸಂಬಂಧಗಳಿಗೆ ತುಂಬಾ ಬೆಲೆ ಕೊಡುತ್ತಾರೆ. ಈ ವರ್ಷ ನಿಮ್ಮ ಪ್ರೀತಿ ಪಾತ್ರರ ಕಷ್ಟಗಳಿಗೆ ಸ್ಪಂದಿಸಲಿದ್ದೀರಿ. ನಿಮ್ಮ ಸಕಾರಾತ್ಮಕ ಗುಣದಿಂದ ಕುಟುಂಬದ ಯಾವುದೇ ಸಮಸ್ಯೆಗಳನ್ನೂ ಪರಿಹರಲಿದ್ದೀರಿ.

ಇನ್ನೊಬ್ಬರ ಬಗ್ಗೆ ನೀವು ಕಾಳಜಿ ವಹಿಸುವ ಪರಿ ಎಲ್ಲರ ಮನಸ್ಸು ಗೆಲ್ಲಲಿದೆ. 2025 ರಲ್ಲಿ ಮೊದಲ ಮೂರು ತಿಂಗಳು ಕೆಲವೊಂದು ಸಂಷ್ಟಕಗಳನ್ನು ಎದುರಿಸಬೇಕಾಗಿ ಬರಬಹುದು. ಆದರೆ ಬಳಿಕ ಪರಿಸ್ಥಿತಿ ಸುಧಾರಣೆಯಾಗಲಿದೆ.  ಕುಟುಂಬದವರೊಂದಿಗೆ ವಿನೋದ ಯಾತ್ರೆ ಮಾಡುವ ಯೋಗವಿದೆ.

ವೈಯಕ್ತಿಕ ಜೀವನದಲ್ಲಿ ಎಂತಹದ್ದೇ ಸಂಕಷ್ಟಗಳಿದ್ದರೂ ಕುಟುಂಬದವರಿಂದಾಗಿ ಅದನ್ನು ಮರೆಯಲಿದ್ದೀರಿ. ಮೊದಲ ಮೂರು ತಿಂಗಳು ಕುಟುಂಬ ಸದಸ್ಯರೊಂದಿಗೆ ಯಾವುದೇ ವಾಗ್ವಾದವಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಾತಿನ ಮೇಲೆ ನಿಗಾ ಇರಲಿ.

ಅವಿವಾಹಿತರಿಗೆ ವಿವಾಹವಾಗಲು ಸೂಕ್ತ ಸಂಬಂಧಗಳು ಕೂಡಿಬರಲಿದೆ. ಸಂತಾನಾಪೇಕ್ಷಿತ ದಂಪತಿ ಸಿಹಿ ಸುದ್ದಿಯನ್ನು ನಿರೀಕ್ಷಿಸಬಹುದು. ನಿಮ್ಮ ಪೋಷಕರೊಂದಿಗೆ ಸಾಕಷ್ಟು ಸಮಯ ಕಳೆಯುವ ಅವಕಾಶ ಸಿಗುವುದು. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ