Horoscope 2025: ಧನು ರಾಶಿಯವರಿಗೆ ಆರೋಗ್ಯದಲ್ಲಿ ಕುಟುಂಬಕ್ಕೂ ತೊಂದರೆ

Krishnaveni K

ಶುಕ್ರವಾರ, 22 ನವೆಂಬರ್ 2024 (09:06 IST)
ಬೆಂಗಳೂರು: 2025 ನೇ ವರ್ಷ ಧನು ರಾಶಿಯವರಿಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಇದು ಕೇವಲ ಅವರಿಗೆ ಮಾತ್ರವಲ್ಲ, ಕುಟುಂಬಕ್ಕೇ ತೊಂದರೆಯಾಗುವ ಸಾಧ್ಯತೆಗಳಿವೆ.

ಧನು ರಾಶಿಯವರು ಸಾಮಾನ್ಯವಾಗಿ ಲಿವರ್, ಜೀರ್ಣಕ್ರಿಯೆ, ಒತ್ತಡ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. 2025 ನೇ ವರ್ಷದಲ್ಲಿ ವರ್ಷಾರಂಭದಲ್ಲೇ ಆರೋಗ್ಯ ಸಮಸ್ಯೆಗಳು ಕಂಡುಬರಬಹುದಾಗಿದ್ದು, ಎಚ್ಚರಿಕೆಯಿಂದಿರುವುದು ಅಗತ್ಯವಾಗಿದೆ.

ನಿಮ್ಮ ಆರೋಗ್ಯ ಸಮಸ್ಯೆ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗಿ ವರ್ಷಾರಂಭ ನಿಮ್ಮ ಪಾಲಿಗೆ ಅಷ್ಟೇನೂ ಶುಭದಾಯಕವಾಗಿಲ್ಲದೇ ಇರಬಹುದು. ನಿಮ್ಮ ವೈದ್ಯಕೀಯ ಖರ್ಚು ವೆಚ್ಚಗಳೂ ಈ ವರ್ಷ ಹೆಚ್ಚಾಗುವ ಸಾಧ್ಯತೆಯಿದೆ.

ಆದರೆ ಏಪ್ರಿಲ್ ಬಳಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಲಿದೆ. ನಿಮ್ಮ ಆರೋಗ್ಯ ಸುಧಾರಣೆಯಾಗಲಿದ್ದು, ನಿಮ್ಮ ದೈನಂದಿನ ಕೆಲಸಗಳತ್ತ ಗಮನಹರಿಸಲು ಸಾಧ್ಯವಾಗುತ್ತದೆ. ಗರ್ಭಿಣಿ ಸ್ತ್ರೀಯರಿಗೆ ಸುಸ್ರೂತ್ರವಾಗಿ ಹೆರಿಗೆಯಾಗಲಿದೆ.

ಈ ವರ್ಷ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ಹರಿಸುವುದು ತುಂಬಾ ಮುಖ್ಯವಾಗಿರುತ್ತದೆ. ಹೀಗಾಗಿ ಪ್ರಾಣಾಯಾಮ, ಯೋಗ ಮಾಡುವುದರತ್ತ ಗಮನಹರಿಸಿ. ಹಿರಿಯರಿಗೆ ಕಾಲು, ಗಂಟುಗಳಲ್ಲಿ ನೋವು ಕಂಡುಬರುವ ಸಾಧ್ಯತೆಯಿದೆ. ಸಣ್ಣ ಮಟ್ಟಿನ ಶಸ್ತ್ರಚಿಕಿತ್ಸೆಗೊಳಗಾಗಬೇಕಾದೀತು. ಆರೋಗ್ಯ ಸುಧಾರಣೆಗಾಗಿ ಈ ವರ್ಷ ಮೃತ್ಯುಂಜಯ ಮಂತ್ರ ಜಪಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ