ಬೆಂಗಳೂರು: ವೃಶ್ಚಿಕ ರಾಶಿಯವರಿಗೆ 2025 ರ ಆರಂಭ ಕೌಟುಂಬಿಕವಾಗಿ ಅನುಕೂಲಕರವಾಗಿರಲಿದೆ. ಈ ವರ್ಷ ಕೆಲವು ಸಮಸ್ಯೆಗಳಿದ್ದರೂ ನಂತರ ಪರಿಹಾರವಾಗಿ ಉತ್ತಮ ಫಲಗಳನ್ನು ಕಾಣಲಿದ್ದೀರಿ.
ವೃಶ್ಚಿಕ ರಾಶಿಯವರಿಗೆ 2025 ಕೌಟುಂಬಿಕವಾಗಿ ಉತ್ತಮ ವರ್ಷ ಎಂದೇ ಹೇಳಬಹುದು. ವರ್ಷದ ಆರಂಭದಲ್ಲಿ ಗುರುವಿನ ದೆಸೆಯಿಂದ ಉತ್ತಮ ಫಲಗಳನ್ನು ಕಾಣಲಿದ್ದೀರಿ. ಕೌಟುಂಬಿಕವಾಗಿ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಪ್ರವಾಸಕ್ಕೆ ಯೋಜನೆ ರೂಪಿಸಲಿದ್ದೀರಿ.
ಏಪ್ರಿಲ್ ಬಳಿಕ ದಾಂಪತ್ಯದಲ್ಲಿ ಕೊಂಚ ಭಿನ್ನಾಭಿಪ್ರಾಯಗಳು ತಲೆದೋರಬಹುದು. ಆದರೆ ಮುಕ್ತವಾಗಿ ನಿಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡು ಭಿನ್ನಾಭಿಪ್ರಾಯಗಳನ್ನು ಅಲ್ಲಿಯೇ ಸರಿಡಪಡಿಸಿಕೊಂಡರೆ ಉತ್ತಮ. ಜುಲೈ ಬಳಿಕ ಪ್ರೀತಿ, ದಾಂಪತ್ಯ ಜೀವನದಲ್ಲಿ ಸುಧಾರಣೆ ಕಂಡುಬರುವುದು.
ವರ್ಷಾಂತ್ಯದಲ್ಲಿ ಆಪ್ತರ ಅಗಲುವಿಕೆ ಅಥವಾ ಭಾವನಾತ್ಮಕ ಸನ್ನಿವೇಶಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಆದರೆ ನಿಮ್ಮ ಮನಸ್ಸಿನ ಭಾವನೆಗಳನ್ನು ನಿಯಂತ್ರಿಸಿಕೊಂಡು ಮುಂದಿನ ಜೀವನದ ಬಗ್ಗೆ ಗಮನಹರಿಸಬೇಕಾದ ಅನಿವಾರ್ಯತೆಯಿರಲಿದೆ.