ಜೀವನದಲ್ಲಿ ಇವರಿಗೆ ಅನ್ಯಾಯ ಮಾಡಿದರೆ ಆ ಶಾಪ ಮುಂದಿನ ಪೀಳಿಗೆಯನ್ನು ಕಾಡುತ್ತದೆಯಂತೆ

ಬುಧವಾರ, 19 ಡಿಸೆಂಬರ್ 2018 (06:57 IST)
ಬೆಂಗಳೂರು : ನಾವು ಯಾರಿಗಾದರೂ ಅನ್ಯಾಯ ಮಾಡಿದರೆ ಆ ಶಾಪ ನಮಗೆ ಮಾತ್ರವಲ್ಲ ಮುಂದಿನ ಪೀಳಿಗೆಗೂ ಅದು ತಗಲುತ್ತದೆ. ಅದರಲ್ಲೂ ಇವರಿಗೆ ಅನ್ಯಾಯ ಮಾಡಿದರೆ ಅದರ ಪಾಪ ನಮ್ಮ ಮುಂದಿನ ಪೀಳಿಗೆಯವರು ಅನುಭವಿಸಬೇಕಾಗುತ್ತದೆ.


ಕುಟುಂಬದಲ್ಲಿ ಯಾರಾದರೂ ಒಬ್ಬರು ಜೀವನದಲ್ಲಿ  ಸ್ರ್ತೀ, ತಂದೆ ತಾಯಿಗೆ ಅನ್ಯಾಯ ಮಾಡಿದರೆ ಅಥವಾ ಪಿತೃ ಕಾರ್ಯಗಳನ್ನು ಮಾಡದಿದ್ದರೆ ಅಂತವರಿಗೆ ಪಿತೃಶಾಪ ಹಾಗೂ ಸ್ರ್ತೀ ಶಾಪ ತಗಲುತ್ತದೆ. ಇದು ಮುಂದಿನ ಪೀಳಿಗೆಯವರನ್ನು ಕೂಡ ಕಾಡುತ್ತದೆ.

 

ಸರ್ಪಗಳನ್ನು ಸಾಯಿಸಿದರೆ ಸರ್ಪದೋಷ ಬರುತ್ತದೆ. ಇದರಿಂದ ಜೀವನದಲ್ಲಿ ಅಭಿವೃದ್ಧಿ ಕಾಣುವುದಿಲ್ಲ. ಸಂತಾನ ದೋಷ ವ್ಯಾಪಾರ ದಲ್ಲಿ ನಷ್ಟ ಅನುಭವಿಸುತ್ತಾರೆ.

 

ವಯಸ್ಸಿನಲ್ಲಿ ದುರಾಭ್ಯಾಸಕ್ಕೆ ಒಳಗಾದರೆ ಇದು  ವ್ಯಾಧಿಯಂತೆ ಮುಂದಿನ ಪೀಳಿಗೆಗೂ ಕಾಡುತ್ತದೆ. ಗುರುವನ್ನು ಅವಮಾನಿಸಿದರೆ ಹಾಗೂ ಹಸಿರು ಗಿಡಗಳನ್ನು ಕಿತ್ತುಹಾಕಿದರೆ ಗುರುಗ್ರಹದ ದೋಷಕ್ಕೆ ಒಳಗಾಗುತ್ತಾರೆ. ಇದರಿಂದ ಮಕ್ಕಳ ಜೀವನದಲ್ಲಿ ವೃದ್ಧಿಕಾಣುವುದಿಲ್ಲ.

 

ಆದ್ದರಿಂದ ಜೀವನದಲ್ಲಿ ಧರ್ಮವನ್ನು ಪಾಲಿಸಿದರೆ ನಮ್ಮ ಮಕ್ಕಳು ಸಹ ಧರ್ಮಪರಿಪಾಲಕರಾಗುತ್ತಾರೆ. ಅಭಿವೃದ್ಧಿ ಕಾಣುತ್ತಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ