ತುಟಿಯ ಮೇಲ್ಭಾಗದಲ್ಲಿ ಹುಟ್ಟಿದ ಕೂದಲನ್ನು ನಿವಾರಿಸಲು ಇದನ್ನು ಬಳಸಿ

ಮಂಗಳವಾರ, 18 ಡಿಸೆಂಬರ್ 2018 (09:52 IST)
ಬೆಂಗಳೂರು : ಕೆಲವು ಹುಡುಗಿಯರಿಗೆ ಮುಖದ ಮೇಲೆ ಅದರಲ್ಲೂ  ಲಿಪ್ ನ ಮೇಲ್ಭಾಗದಲ್ಲಿ ಕೂದಲು ಹುಟ್ಟುತ್ತದೆ. ಇದು ಅವರ ಮುಖದ ಅಂದವನ್ನು ಕೆಡಿಸುತ್ತದೆ. ಆದ್ದರಿಂದ ಕೆಲವರು ಪಾರ್ಲರಿಗೆ ಹೋಗಿ ಇದನ್ನು ತೆಗೆಯುತ್ತಾರೆ. ಆದರೆ ಇದನ್ನು ಮನೆಯಲ್ಲೇ ತೆಗೆಯಬಹುದು. ಅದು ಹೇಗೆಂಬುದು ಇಲ್ಲಿದೆ ನೋಡಿ.


ಲಿಂಬೆ ರಸಕ್ಕೆ ನೀರು ಹಾಗೂ ಸಕ್ಕರೆಯನ್ನು ಮಿಕ್ಸ್ ಮಾಡಿ. ಸಕ್ಕರೆ ಕರಗಿದ ನಂತ್ರ ತುಟಿಯ ಮೇಲ್ಭಾಗಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ಸ್ವಚ್ಛಗೊಳಿಸಿಕೊಳ್ಳಿ. ಮೊಟ್ಟೆಯ ಬಿಳಿ ಭಾಗಕ್ಕೆ ಕಡಲೆ ಹಿಟ್ಟು ಹಾಗೂ ಸಕ್ಕರೆಯನ್ನು ಹಾಕಿ ಮಿಕ್ಸ್ ಮಾಡಿ. ಇದನ್ನು ತುಟಿಯ ಮೇಲ್ಭಾಗಕ್ಕೆ ಹಚ್ಚಿಕೊಂಡು 30 ನಿಮಿಷ ಬಿಟ್ಟು ಸ್ವಚ್ಛಗೊಳಿಸಿಕೊಳ್ಳಿ.


ಸ್ವಲ್ಪ ಮೊಸರಿಗೆ ಒಂದು ಚಮಚ ಕಡಲೆ ಹಿಟ್ಟನ್ನು ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ತುಟಿಯ ಮೇಲ್ಭಾಗಕ್ಕೆ ಹಚ್ಚಿಕೊಂಡು ಒಣಗಿದ ನಂತರ ನಿಧಾನವಾಗಿ ತೆಗೆಯಿರಿ. ಕ್ರಮೇಣ ಕೂದಲು ಹುಟ್ಟುವ ಪ್ರಮಾಣ ಕಡಿಮೆಯಾಗುತ್ತ ಬರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ