ಈ ದಿನದಂದು ತುಳಸಿ ಗಿಡವನ್ನು ಕತ್ತರಿಸಿದರೆ ದರಿದ್ರ ಸುತ್ತಿಕೊಳ್ಳುವುದಂತೆ
ಮಂಗಳವಾರ, 23 ಏಪ್ರಿಲ್ 2019 (07:15 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಮಹತ್ವದ ಸ್ಥಾನವಿದೆ. ತುಳಸಿಯನ್ನು ದೇವರೆಂದು ಪೂಜಿಸುತ್ತಾರೆ. ಆದ್ದರಿಂದ ತುಳಸಿ ಗಿಡ ಕತ್ತರಿಸಲು ಹಾಗೂ ನೆಡಲು ಒಂದು ನಿಯಮವಿದೆ. ಅದನ್ನು ಪಾಲಿಸಿದರೆ ಮಾತ್ರ ಆ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ಇಲ್ಲವಾದಲ್ಲಿ ದಾರಿದ್ರ್ಯಕ್ಕೆ ದಾರಿಯಾಗುತ್ತದೆಯಂತೆ.
ಹೌದು. ಶಾಸ್ತ್ರಗಳ ಪ್ರಕಾರ ಭಾನುವಾರ ತುಳಸಿಯನ್ನು ಕೀಳಬಾರದಂತೆ. ಭಾನುವಾರ ಭಗವಂತ ವಿಷ್ಣುವಿನ ದಿನವಾಗಿದೆ. ತುಳಸಿಯನ್ನು ಭಗವಂತ ವಿಷ್ಣುವಿಗೆ ಪ್ರಿಯವೆಂದು ಪರಿಗಣಿಸಲಾಗಿದೆ. ಹಾಗಾಗಿ ಭಾನುವಾರ ತುಳಸಿಯನ್ನು ಕತ್ತರಿಸಬಾರದಂತೆ.
ಗುರುವಾರ ತುಳಸಿಯನ್ನು ನೆಡಬೇಕಂತೆ. ಕಾರ್ತಿಕ ಮಾಸದಲ್ಲಿ ತುಳಸಿ ನೆಡುವುದು ಶುಭಕರ. ತುಳಸಿಯನ್ನು ಮನೆ ಹಿಂದಲ್ಲ ಮನೆ ಮುಂದೆ ಇಡಬೇಕಂತೆ. ಇದರಿಂದ ಮನೆಗೆ ನಕರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.