ಈ ವಯಸ್ಸಿನ ಮಕ್ಕಳಿಗೆ ಜೇನುತುಪ್ಪ ನೀಡಿದರೆ ಜೀವಕ್ಕೆ ಆಪತ್ತು

ಮಂಗಳವಾರ, 23 ಏಪ್ರಿಲ್ 2019 (07:14 IST)
ಬೆಂಗಳೂರು : ಮಕ್ಕಳಿಗೆ ಪ್ರತಿದಿನ ಜೇನುತುಪ್ಪ ಕೊಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಶೀತ, ಕೆಮ್ಮು,ಕಫದ ಸಮಸ್ಯೆಯಿಂದ ದೂರವಿರಬಹುದು ಎನ್ನುತ್ತಾರೆ. ಆದರೆ ಚಿಕ್ಕ ಮಕ್ಕಳಿಗೆ ಜೇನುತುಪ್ಪ ಕೊಡಬಾರದೆಂದು ವೈದ್ಯರು ಹೇಳುತ್ತಾರೆ.


ಹೌದು. ಬೇಬಿ ಸೆಂಟರ್ ನ ವಿಷಶಾಸ್ತ್ರಜ್ಞರು ಮತ್ತು ಆಹಾರ ವಿಜ್ಞಾನಿಗಳ ಅನುಸಾರ 12 ತಿಂಗಳಿಗಿಂತ ಚಿಕ್ಕ ವಯಸ್ಸಿನ ಶಿಶುಗಳಿಗೆ ಜೇನುತುಪ್ಪ ನೀಡಬಾರದು. ಜೇನುತಪ್ಪ ಕ್ಲೊಸ್ಟ್ರಿಡಿಯಮ್ ಬೊಟುಲಿನಮ್ ಎನ್ನುವ ಬೀಜಗಳನ್ನು ಹೊಂದಿದ್ದು, ಅವುಗಳು ಶಿಶುವಿನ ಕರುಳಿನಲ್ಲಿ ಮೊಳಕೆಯೊಡೆದು, ಬೊಟುಲಿಸ್ಮ್ ಸೋಂಕಿಗೆ ಕಾರಣವಾಗಬಹುದು. 


ಕೆಲವು ಬಾರಿ ತಾಯಂದಿರು ಜೇನುತುಪ್ಪವನ್ನು ಕಾಯಿಸಿ, ಮಕ್ಕಳಿಗೆ ನೀಡುತ್ತಾರೆ. ಆದರೆ ಶಾಖದಿಂದ ಈ ಬೀಜಗಳು ಸಾಯುವುದಿಲ್ಲ. ಈ ಬೀಜಕಗಳು ಮಗುವಿನ ಜೀರ್ಣಾಂಗಗಳಲ್ಲಿ ಬೆಳೆದು, ನಿಮ್ಮ ಮಗುವಿನ ದೇಹದಲ್ಲಿ ಹಾನಿಕಾರಕ ನಂಜನ್ನು ಉತ್ಪಾದಿಸಬಹುದು. ಇದು ನಿಮ್ಮ ಮಗುವಿಗೆ ಮಾರಣಾಂತಿಕವೂ ಆಗಬಹುದು. ನಿಮ್ಮ ಮಗು ಒಂದು ವರ್ಷ ವಯಸ್ಸನ್ನು ದಾಟಿದಲ್ಲಿ, ಅದು ಈ ಬೀಜಗಳು ನಿಮ್ಮ ಮಗುವಿಗೆ ಯಾವುದೇ ರೀತಿಯ ಹಾನಿ ಮಾಡಲಾರವು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ