ಅಮಾವಾಸ್ಯೆಯೆಂದು ಹೀಗೆ ಮಾಡಿದರೆ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳಂತೆ

ಶನಿವಾರ, 7 ಸೆಪ್ಟಂಬರ್ 2019 (06:26 IST)
ಬೆಂಗಳೂರು : ಅಮಾವಾಸ್ಯೆಯನ್ನು ಅಶುಭವೆಂದು ನಂಬಲಾಗಿದೆ. ಅಂದು ಯಾವುದೇ ಕೆಲಸವನ್ನು ಮಾಡಬಾರದು ಎಂದು ಹೇಳುತ್ತಾರೆ. ಆದರೆ ಅಮಾವಾಸ್ಯೆ ರಾತ್ರಿ ಲಕ್ಷ್ಮಿ ದೇವಿಯ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣಕ್ಕೆ ಕೊರತೆ ಇರುವುದಿಲ್ಲ ಎಂದು ಪಂಡಿತರು ಹೇಳುತ್ತಾರೆ.
ಅಮಾವಾಸ್ಯೆಯ ರಾತ್ರಿ ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಚಂದನ ಅಥವಾ ಕುಂಕುಮದಿಂದ ಕಮಲ, ಸುದರ್ಶನ ಚಕ್ರ, ಓಂ, ದೇವಿ ಲಕ್ಷ್ಮಿಯ ಪಾದ, ತ್ರಿಶೂಲ, ಧನುಷ್, ಸ್ವಸ್ತಿಕ್ ಇವುಗಳಲ್ಲಿ ಯಾವುದಾದರೊಂದನ್ನು ಬಿಡಿಸಿ ನಂತರ ಮಂತ್ರ ಪಠಿಸಬೇಕು. ಆ ದಿನ ಆಹಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸೇವಿಸಬಾರದು. ಹೀಗೆ ಮಾಡಿದರೆ ಲಕ್ಷ್ಮೀದೇವಿಯು ಪ್ರಸನ್ನಗೊಂಡು ಆ ಮನೆಯಲ್ಲ ಶಾಶ್ವತವಾಗಿ ನೆಲೆಯೂರುತ್ತಾಳಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ