ಈ ಐದು ಜನರಿಗೆ ಊಟ ಹಾಕಿದರೆ ನಿಮ್ಮ ಪಾಪಗಳು ನಿವಾರಣೆಯಾಗುತ್ತದೆಯಂತೆ
ಸೋಮವಾರ, 17 ಸೆಪ್ಟಂಬರ್ 2018 (12:35 IST)
ಬೆಂಗಳೂರು : ಕೆಲವರು ಅನೇಕ ಪಾಪ ಕರ್ಮಗಳನ್ನು ಮಾಡಿರುತ್ತಾರೆ. ನಂತರ ಅದರ ಪರಿಹಾರಕ್ಕಾಗಿ ದೇವರಿಗೆ ವ್ರತ, ಪೂಜೆಗಳನ್ನು ಮಾಡುತ್ತಾರೆ. ಆದರೆ ಹೀಗೆ ಮಾಡಿದರೆ ಪಾಪಕರ್ಮಗಳು ದೂರವಾಗುವುದಿಲ್ಲ. ಅದಕ್ಕೆ ಈ ಐದು ಜನರಿಗೆ ಊಟ ಹಾಕಿದರೆ ನಿಮ್ಮ ಪಾಪಗಳು ನಿವಾರಣೆಯಾಗುತ್ತವೆ ಎಂದು ಮಹಾಭಾರತದ ಒಂದು ಶ್ಲೋಕದಲ್ಲಿ ತಿಳಿಸಲಾಗಿದೆ.
*ಶ್ರದ್ಧಾ ಪಕ್ಷದಲ್ಲಿ ಪಿತೃಗಳಿಗೆ ಭೋಜನ ನೀಡುವುದರಿಂದ ಪಿತೃಗಳಿಗೆ ತೃಪ್ತಿ ಸಿಗುತ್ತದೆ. ಹಾಗೇ ಶ್ರದ್ಧಾ ಪಕ್ಷದಂದು ಪೂರ್ಣ ಶ್ರದ್ಧಾ ಭಕ್ತಿಯಿಂದ ಬ್ರಾಹ್ಮಣರಿಗೆ ಭೋಜನ ಮಾಡಿಸುತ್ತಾರೋ ಅವರ ಕಷ್ಟಗಳೆಲ್ಲಾ ದೂರವಾಗುತ್ತದೆ.
*ಪಂಡಿತರು, ಖುಷಿಮುನಿಗಳಿಗೆ ಭೋಜನ ನೀಡುವುದು ಪುಣ್ಯದ ಕಾರ್ಯ ಎನ್ನಲಾಗುತ್ತದೆ. ಯಾರು ಪಂಡಿತರಿಗೆ ಖುಷಿಗಳಿಗೆ ಭೋಜನ ನೀಡುತ್ತಾರೋ ಅವರಿಗೆ ತಮ್ಮ ಎಲ್ಲಾ ಕೆಲಸದಲ್ಲೂ ಸಫಲತೆ ದೊರೆಯುತ್ತದೆ. ಪಾಪಗಳಿಗೆ ಪ್ರಾಯಶ್ಚಿತ ದೊರೆಯುತ್ತದಂತೆ.
*ಅತಿಥಿಗಳು ದೇವರಿಗೆ ಸಮಾನ ಎನ್ನಲಾಗುತ್ತದೆ. ಯಾವ ಮನೆಯಲ್ಲಿ ಅತಿಥಿಗಳ ಸಮ್ಮಾನವನ್ನು ಚೆನ್ನಾಗಿ ಮಾಡಲಾಗುತ್ತದೋ ಅಲ್ಲಿ ದೇವತೆಗಳು ನೆಲೆಸುತ್ತಾರೆ.
*ಬಹುತೇಕರು ಬಿಕ್ಷುಕರನ್ನು, ಮನೆ ಮಠ ಇಲ್ಲದವರನ್ನು ಕೀಳಾಗಿ ಕಾಣುತ್ತಾರೆ. ಯಾರು ಅಂತಹವರನ್ನು ಪ್ರೀತಿಯಿಂದ ಕಂಡು ಅವರಿಗೆ ಆಹಾರ ನೀಡುತ್ತಾರೋ ಅಂತಹವರಿಗೆ ಸಮಾಜದಲ್ಲಿ ಸ್ಥಾನ ಮಾನ ಸಿಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.