ಲಕ್ಷ್ಮಿಕಟಾಕ್ಷವಿರಲು ಆ ಮನೆಯಲ್ಲಿ ಈ 5 ವಸ್ತುಗಳು ಇರಲೇಬೇಕಂತೆ
ಸೋಮವಾರ, 10 ಸೆಪ್ಟಂಬರ್ 2018 (11:26 IST)
ಬೆಂಗಳೂರು : ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಹಣದೊಂದಿಗೆ ಶುಭವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಯಾಕೆಂದರೆ ಹಿಂದೂ ಪುರಾಣಗಳ ಪ್ರಕಾರ ಲಕ್ಷ್ಮಿದೇವಿ ಧನಕ್ಕೆ, ಐಶ್ವರ್ಯಕ್ಕೆ ಅಧಿಪತಿ. ಆಕೆಯನ್ನು ಪೂಜಿಸಿದರೆ ಎಲ್ಲವೂ ಶುಭವಾಗುತ್ತದೆ. ಹಾಗೇ ಲಕ್ಷ್ಮಿಕಟಾಕ್ಷ ಮನೆಯಲ್ಲಿ ನೆಲೆಸಿರಬೇಕೆಂದರೆ ಆ ಮನೆಯಲ್ಲಿ ಈ 5 ವಸ್ತುಗಳು ಇರಲೇಬೇಕು.
*ಒಂದು ನವಿಲು ಗರಿ ತಂದುಕೊಂಡು ಅದನ್ನು ನೀವು ಲಕ್ಷ್ಮಿ ದೇವಿಯನ್ನು ಪೂಜಿಸುವ ಬಳಿ ಇಡಬೇಕು. ಇದರಿಂದ ಆ ದೇವಿ ಅನುಗ್ರಹ ಸಿಗುತ್ತದೆ. ಅಷ್ಟೇ ಅಲ್ಲದೆ, ನವಿಲು ಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನೆಗಟೀವ್ ಶಕ್ತಿ ಎಲ್ಲಾ ದೂರವಾಗುತ್ತದೆ. ಪಾಸಿಟೀಟ್ ಎನರ್ಜಿ ಬರುತ್ತದೆ. ಇದರಿಂದ ನಮಗೆ ಸಾಕಷ್ಟು ಒಳಿತಾಗುತ್ತದೆ
*ಬಂಗಾರ ಅಥವಾ ಬೆಳ್ಳಿಯಿಂದ ಮಾಡಿದ ನಾಣ್ಯವನ್ನು ಪೂಜಾಕೋಣೆಯಲ್ಲಿ ಇಡಬೇಕು. ಆ ನಾಣ್ಯದ ಮೇಲೆ ಲಕ್ಷ್ಮಿದೇವಿ, ವಿನಾಯಕ ಇದ್ದರೆ ಇನ್ನೂ ಒಳಿತು. ಇದರಿಂದ ಅಪಾರ ಸಂಪತ್ತು ಉಂಟಾಗುತ್ತದೆ
*ತಾವರೆ ಹೂವು ಎಂದರೆ ಲಕ್ಷ್ಮಿದೇವಿಗೆ ಎಷ್ಟೋ ಇಷ್ಟ. ಆ ದೇವಿ ತಾವರೆ ಹೂವಿನ ಮೇಲೆ ಕುಳಿತುಕೊಳ್ಳುತ್ತದೆ ಆದಕಾರಣ ಇದರಿಂದ ಆಕೆಯನ್ನು ಪೂಜಿಸಿದರೆ ಎಲ್ಲಾ ಲಾಭಗಳೇ ಉಂಟಾಗುತ್ತವೆ. ಹಣ ಚೆನ್ನಾಗಿ ಕೈಸೇರುತ್ತದಂತೆ.
*ಲಕ್ಷ್ಮಿದೇವಿ ತಾವರೆಹೂವಿನ ಮೇಲೆ ಕುಳಿತು ಸಂಪತ್ತು ಕರುಣಿಸುತ್ತಿರುವಂತೆ ಚಿತ್ರಪಟದಲ್ಲಿ ಅಥವಾ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಂಡು ನಿತ್ಯ ಪೂಜಿಸಬೇಕು. ಇದರಿಂದ ಸಂಪತ್ತು ಸಿಗುತ್ತದಂತೆ. ಇದರಿಂದ ಮನೆಯಲ್ಲಿ ಎಲ್ಲರಿಗೂ ಒಳಿತೆ ಆಗುತ್ತದಂತೆ.
*ಮಹಿಳೆಯರು ಹಣೆಗೆ ಧರಿಸುವ ಕುಂಕುಮ, ಕೈಗಳಿಗೆ ಧರಿಸುವ ಬಳೆ, ಗೋರಂಟಿಯಂತಹ ಹಲವು ವಿಧದ ಅಲಂಕರಣ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕಂತೆ. ಇದರಿಂದ ಅವರಿಗೆ ಒಳಿತಾಗಿ ಸಂಪತ್ತು ಸಿದ್ಧಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.