ಉತ್ತಮ ಆರೋಗ್ಯಕ್ಕಾಗಿ ಮನೆಯಲ್ಲಿ ಕೆಲವು ಬದಲಾವಣೆ ಮಾಡಿ

Krishnaveni K

ಶನಿವಾರ, 29 ಜೂನ್ 2024 (08:50 IST)
ಬೆಂಗಳೂರು: ಕೆಲವರಿಗೆ ಮನೆಯ ದೋಷವೋ ಏನೋ ಎಂಬಂತೆ ಪ್ರತಿನಿತ್ಯ ಮನೆಯ ಸದಸ್ಯರಿಗೆ ಒಂದಲ್ಲಾ ಒಂದು ಕಾಯಿಲೆ ತಪ್ಪಿದ್ದಲ್ಲ ಎನ್ನುವ ಪರಿಸ್ಥಿತಿಯಿರುತ್ತದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ವಾಸ್ತು ಪ್ರಕಾರ ಕೆಲವೊಂದು ಬದಲಾವಣೆ ಮಾಡಿದರೆ ಒಳಿತಾಗುತ್ತದೆ.

ಮನೆಯ ಬೆಡ್ ರೂಂ ಯಾವ ದಿಕ್ಕಿನಲ್ಲಿದೆ, ಬೆಡ್ ಎಲ್ಲಿ ಇಟ್ಟಿದ್ದೀರಿ ಎನ್ನುವುದು ನಿಮ್ಮ ಮನೆಯ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ ಬೆಡ್ ರೂಂ ಮನೆಯ ನೈಋತ್ಯ ಅಥವಾ ದಕ್ಷಿಣ ದಿಕ್ಕಿನಲ್ಲಿದ್ದರೆ ಮನೆಯ ಸದಸ್ಯರ ಆರೋಗ್ಯ ಚೆನ್ನಾಗಿರುತ್ತದೆ.

ಅದೇ ರೀತಿ ಬೆಡ್ ರೂಂನಲ್ಲಿ ಬೆಡ್ ನ ಮೇಲೆಯೇ ಬೀಮ್ ಇರದಂತೆ ನೋಡಿಕೊಳ್ಳುವುದು ಮುಖ್ಯ. ಬೆಡ್ ರೂಂನ ಗೋಡೆಯ ಬಣ್ಣವೂ ಮುದ ನೀಡುವಂತಹ ಬಣ್ಣದಲ್ಲಿರಲಿ. ಇದರಿಂದ ಸಕಾರಾತ್ಮಕ ಎನರ್ಜಿ ಮನೆಯಲ್ಲಿ ತುಂಬಿರುತ್ತದೆ. ಅದರಲ್ಲೂ ಮನೆಯ ಎಲ್ಲಾ ಕೊಠಡಿಯೂ ಸರಿಯಾಗಿ ಗಾಳಿಯಾಡುವಂತೆ ಇಟ್ಟುಕೊಳ್ಳವುದು ಮುಖ್ಯ.

ಹಗಲು ಹೊತ್ತಿನಲ್ಲೂ ಕೆಲವು ಮನೆಗಳಲ್ಲಿ ದೀಪ ಉರಿಸಿಡಬೇಕಾದ ಪರಿಸ್ಥಿತಿಯಿರುತ್ತದೆ. ಹಗಲು ಹೊತ್ತಿನಲ್ಲಾದರೂ ದೀಪದ ಬೆಳಕಿನ ಸಹಾಯವಿಲ್ಲದೇ ಬೆಳಕು ಬರುವಂತೆ ಮನೆಯನ್ನು ಡಿಸೈನ್ ಮಾಡಿ. ಹಾಗೂ ಮನೆಯ ಕಿಟಿಕಿಯಿಂದ ಹೊರಗೆ ನೋಡಿದರೆ ಹಸಿರು ಸಸ್ಯ ಸಂಕುಲಗಳು ಕಾಣುವಂತಿದ್ದರೆ ಮನೆಯ ವಾತಾವರಣವೂ ಸಕಾರಾತ್ಮಕವಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ