ಮನೆಯಲ್ಲಿ ಸಕರಾತ್ಮಕ ಶಕ್ತಿ ತಾಂಡವಾಡಲು ಏರ್ ಫ್ರೆಶ್ ನರ್ ಬಳಸುವ ಬದಲು ಈ ಹೂವನ್ನು ಇಡಿ
ಶುಕ್ರವಾರ, 4 ಡಿಸೆಂಬರ್ 2020 (06:59 IST)
ಬೆಂಗಳೂರು : ಮನೆಯಲ್ಲಿ ಸುವಾಸನೆ ಹೊಮ್ಮುತ್ತಿದ್ದರೆ ಆ ಮನೆಯಲ್ಲಿ ಸಕರಾತ್ಮಕ ಶಕ್ತಿ ನೆಲೆಸಿರುತ್ತದೆ. ಇದರಿಂದ ಆ ಮನೆಗೆ ಒಳ್ಳೆಯದಾಗುತ್ತದೆ. ಅದಕ್ಕಾಗಿ ಕೆಲವರು ಮಾರುಕಟ್ಟೆಯಲ್ಲಿ ಸಿಗುವಂತಹ ಸುಗಂಧಭರಿತ ಏರ್ ಫ್ರೆಶ್ ನರ್ ನ್ನು ಬಳಸುತ್ತಾರೆ. ಅದರ ಬದಲು ನೈಸರ್ಗಿಕವಾದ ಈ ವಸ್ತುವನ್ನು ಇಡಿ.
ಬೆಳಿಗ್ಗೆ ಎದ್ದ ನಂತರ ಶುದ್ಧ ನೀರು ತುಂಬಿದ ಗಾಜಿನ ಬಟ್ಟಲಿನಲ್ಲಿ ತಾಜಾ ಗುಲಾಬಿ ಹೂವಿನ ದಳವನ್ನು ಹಾಕಿ ಮತ್ತು ಬಟ್ಟಲನ್ನು ಹೊರಗಿನಿಂದ ಶುದ್ಧ ಗಾಳಿ ಬರುವ ಸ್ಥಳದಲ್ಲಿ ಇರಿಸಿ. ಗಾಳಿಯಿಂದ ಬರುವ ಸುಗಂಧವು ಕ್ರಮೇಣ ಮನೆಯಾದ್ಯಂತ ಹರಡುತ್ತದೆ. ಮತ್ತು ಇಡಿ ಮನೆ ಸುಗಂಧ ಮತ್ತು ತಾಜಾತನದ ವಾಸನೆಯಿಂದ ಕೂಡಿರುತ್ತದೆ.