ಈ ಎರಡು ದಿನ ಉಪ್ಪಿಲ್ಲದ ಆಹಾರ ಸೇವನೆ ಮಾಡಿದ್ರೆ ಲಕ್ಷ್ಮೀದೇವಿ ಪ್ರಸನ್ನಳಾಗ್ತಾಳಂತೆ!

ಭಾನುವಾರ, 5 ಮೇ 2019 (07:23 IST)
ಬೆಂಗಳೂರು : ಲಕ್ಷ್ಮೀ ದೇವಿ ತಮ್ಮ ಮನೆಯಲ್ಲಿ ಸದಾ ನೆಲೆಸಿರಬೇಕು ಎಂಬ ಹಂಬಲ ಎಲ್ಲರಲ್ಲೂ ಇರುತ್ತದೆ.  ಲಕ್ಷ್ಮೀ ದೇವಿ ಯಾರ ಮೇಲೆ ಪ್ರಸನ್ನಳಾಗುತ್ತಾಳೋ ಅವರ ಮನೆಯಲ್ಲಿ ಮಾತ್ರ ನೆಲೆಸುತ್ತಾಳೆ. ಅದಕ್ಕಾಗಿ ನಾವು ಪ್ರತಿದಿನ ಈ ಕೆಲಸಗಳನ್ನು ಮಾಡುತ್ತಿರಬೇಕು.


 

ಪ್ರತಿ ಹುಣ್ಣಿಮೆಯಂದು ಖೀರ್ ತಯಾರಿಸಿ ಮಹಾಲಕ್ಷ್ಮಿಗೆ ಅರ್ಪಿಸಬೇಕು. ನಂತರ ಮನೆಯ ಸದಸ್ಯರೆಲ್ಲ ಜೊತೆಯಾಗಿ ಸೇರಿ ಅದನ್ನ  ಸೇವಿಸಬೇಕು. ತಾಯಿ ಧನಲಕ್ಷ್ಮಿಯ ಪೂಜೆಯನ್ನು ದಿನನಿತ್ಯ ಮಾಡಬೇಕು. ಬೆಳಿಗ್ಗೆ ಹಾಗೂ ಸಂಜೆ ಧನಲಕ್ಷ್ಮಿ ಫೋಟೋಕ್ಕೆ ಕುಂಕುಮ, ಅಕ್ಷತೆ, ಗಂಧ ಹಾಕಿ ಪೂಜೆ ಮಾಡಿ ಧೂಪ ಹಚ್ಚಬೇಕು. ಸ್ವಚ್ಛ ಮನಸ್ಸಿನಿಂದ ತಾಯಿಯ ಪೂಜೆ ಮಾಡಬೇಕು.


ಪ್ರತಿದಿನ ಸೂರ್ಯಾಸ್ತದ ವೇಳೆ ಮನೆಯಲ್ಲಿ ಮೂರು ಬಾರಿ ಶಂಖ ಊದಿ, ದೇವಿ ಲಕ್ಷ್ಮಿ ಮುಂದೆ ತುಪ್ಪದ ದೀಪ ಹಚ್ಚಿ, ಸುಗಂಧದ ಧೂಪ ಹಚ್ಚಿ, ಒಂದು ಗುಲಾಬಿ ಹೂವನ್ನು ಅರ್ಪಿಸಬೇಕು. ಭಾನುವಾರ ಹಾಗೂ ಮಂಗಳವಾರ ಉಪ್ಪಿಲ್ಲದ ಆಹಾರ ಸೇವನೆ ಮಾಡಿದ್ರೆ ತಾಯಿ ಲಕ್ಷ್ಮಿ ಪ್ರಸನ್ನಳಾಗ್ತಾಳಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ