ಲಕ್ಷ್ಮೀ ದೇವಿಯ ಈ ಮಂತ್ರ ಜಪಿಸುತ್ತಿದ್ದರೆ ಹಣದ ಸಮಸ್ಯೆಯೇ ಬಾರದು

Krishnaveni K

ಶುಕ್ರವಾರ, 24 ಜನವರಿ 2025 (08:42 IST)
ಬೆಂಗಳೂರು: ಮನೆಯಲ್ಲಿ ಹಣಕಾಸಿನ ಸಮಸ್ಯೆ ಬರಬಾರದು ಎಂದರೆ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸುತ್ತಿದ್ದರೆ ಸಾಕು. ಅದರಲ್ಲೂ ವಿಶೇಷವಾಗಿ ಶುಕ್ರವಾರದಂದು ಪಠಿಸಿ.

ಜೀವನದಲ್ಲಿ ಸುಖ, ಸಮೃದ್ಧಿಯಿರಬೇಕು ಎಂದರೆ ಲಕ್ಷ್ಮೀ ದೇವಿಯ ಅನುಗ್ರಹ ಇರಲೇಬೇಕು. ವಿಶೇಷವಾಗಿ ಶುಕ್ರವಾರದಂದು ಮನೆಯನ್ನು ಸ್ವಚ್ಛಗೊಳಿಸಿ ಸಂಜೆ ಹೊತ್ತಿಗೆ ಮನೆ ಎದುರು ದೀಪ ಹಚ್ಚಿ ಲಕ್ಷ್ಮೀ ಪೂಜೆಯನ್ನು ನೆರವೇರಿಸಬೇಕು.

ಓಂ ಶ್ರೀಂ ಹ್ರೀಂ ಕ್ಲೀಂ ನಮಃ: ಈ ಮಂತ್ರವನ್ನು ಪ್ರತಿನಿತ್ಯ ಪಠಿಸುತ್ತಿದ್ದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.
ಓಂ ಹ್ರೀಂ ಶ್ರೀಂ ಲಕ್ಷ್ಮೀಭ್ಯೋ ನಮಃ: ಈ ಮಂತ್ರವನ್ನು ಪಠಿಸುತ್ತಿದ್ದರೆ ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟ ನಿಮ್ಮದಾಗುತ್ತದೆ.

ಇನ್ನು, ವಿಶೇಷವಾಗಿ ಹಣಕಾಸಿನ ಸಮಸ್ಯೆಯಿದ್ದರೆ ಅದನ್ನು ನಿವಾರಿಸಲು ಲಕ್ಷ್ಮೀ ಗಾಯತ್ರಿ ಮಂತ್ರ ಪಠಿಸುವುದು ಮುಖ್ಯವಾಗಿದೆ. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ದೇವಿಯ ಪೂಜೆ ಜೊತೆಗೆ ಈ ಮಂತ್ರವನ್ನು ಪಠಿಸಿ:

ಓಂ ಕ್ಷೀರಪುತ್ರಾಯ ವಿದ್ಮಹೇ
ಧನಾಧ್ಯಕ್ಷಾಯ ಧೀಮಹಿ
ತನ್ನೋ ಲಕ್ಷ್ಮೀ ಪ್ರಚೋದಯಾತ್

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ