ವಿಶೇಷ ಫಲ ಪ್ರಾಪ್ತಿಯಾಗಲು ವಿಷ್ಣು ಸಹಸ್ರನಾಮವನ್ನು ಹೇಗೆ, ಯಾವಾಗ ಪಠಿಸಬೇಕು ಎಂಬುದನ್ನು ತಿಳಿದುಕೊಳ್ಳಿ

ಶುಕ್ರವಾರ, 16 ಏಪ್ರಿಲ್ 2021 (07:16 IST)
ಬೆಂಗಳೂರು : ವಿಷ್ಣು ದೇವರನ್ನು ಆರಾಧಿಸುವಾಗ ವಿಷ್ಣು ಸಹಸ್ರನಾಮ ಪಠಿಸಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆಯಂತೆ. ಹಾಗಾಗಿ ವಿಷ್ಣು ಸಹಸ್ರನಾಮವನ್ನು ಹೇಗೆ, ಯಾವಾಗ ಪಠಿಸಬೇಕು. ಅದರಿಂದ ಏನು ಫಲ ಎಂಬುದನ್ನು ತಿಳಿದುಕೊಳ್ಳಿ.

ವಿಷ್ಣು ಸಹಸ್ರನಾಮದಲ್ಲಿ ವಿಷ್ಣುವಿನ ಸಾವಿರ ಹೆಸರು ಉಲ್ಲೇಖವಾಗಿರುತ್ತದೆ.  ಅದನ್ನು ಪಠಿಸುವುದರಿಂದ ಜೀವನದಲ್ಲಿ ಎದುರಾದ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತದೆ. ವಿಶೇಷವಾಗಿ ಗುರುಗ್ರಹದ ದೋಷವನ್ನು ನಿವಾರಿಸಬಹುದು ಎಂದು ಹೇಳಲಾಗುತ್ತದೆ.

ಬೆಳಿಗ್ಗೆ  ವಿಷ್ಣು ದೇವರ ಫೋಟೊದ ಮುಂದೆ ಕುಳಿತು ಹಳದಿ ಬಟ್ಟೆಯನ್ನು ಧರಿಸಿ ದೇವರಿಗೆ ಕಡಲೆ ಮತ್ತು ಬೆಲ್ಲ ಅಥವಾ ಹಳದಿ ಸಿಹಿತಿಂಡಿಯನ್ನು ನೈವೇದ್ಯವಾಗಿ ಅರ್ಪಿಸಿ. ಬಳಿಕ ಸಹಸ್ರನಾಮ ಪಠಿಸಿ. ಗುರುವಾರ ಉಪ್ಪನ್ನು ಸೇವಿಸಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ