ರಾಜ್ಯದ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಕೊರತೆ ಆಗಿಲ್ಲ- ವಿಪಕ್ಷಗಳ ಆರೋಪಕ್ಕೆ ಸಚಿವ ಸುಧಾಕರ್ ತಿರುಗೇಟು

ಗುರುವಾರ, 15 ಏಪ್ರಿಲ್ 2021 (11:12 IST)
ಬೆಂಗಳೂರು : ರಾಜ್ಯದ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಕೊರತೆ ಆಗಿಲ್ಲ ಎಂದು ವಿಪಕ್ಷಗಳ ಆರೋಪಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ತಿರುಗೇಟು ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೂ ರೆಮ್ಡಿಸಿವಿರ್ ಪೂರೈಕೆಯಾಗುತ್ತಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆಯೂ ಇಲ್ಲ. ಕೊರೊನಾ ವಿಷಯದಲ್ಲಿ ವಿಪಕ್ಷಗಳು ರಾಜಕಾರಣ ಮಾಡಬಾರದು. ಜನಸಾಮಾನ್ಯರು ಆತಂಕದಲ್ಲಿದ್ದಾರೆ. ರಾಜಕಾರಣ ಬಿಟ್ಟು ಸರ್ಕಾರದ ಜತೆ ಕೈಜೋಡಿಸಿ ಎಂದು ವಿಪಕ್ಷಗಳ ವಿರುದ್ಧ ಸಚಿವ ಸುಧಾಕರ್ ಕಿಡಿಕಾರಿದ್ದಾರೆ.

ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿ ಅವರು, ದೇಶದಲ್ಲಿ ರೆಮ್ ಡಿಸಿವಿರ್  ಇಂಜೆಕ್ಷನ್ ಅಭಾವ ಸೃಷ್ಟಿಯಾಗಿದೆ. ಸೋಂಕಿತರಿಗೆ ಚಿಕಿತ್ಸೆಯೇ ಖಾತ್ರಿ ಇಲ್ಲದಂತಾಗಿದೆ. ಕೇಂದ್ರ ಇಷ್ಟಬಂದಂತೆ ರೆಮ್ ಡಿಸಿವಿರ್ ರಫ್ತು ಮಾಡಿದೆ. ಔಷಧಿಗೆ ಅಭಾವದಿಂದ ಆಸ್ಪತ್ರೆಗಳು ರೆಮ್ ಡಿಸಿವಿರ್ ಗೆ ಕಾಯುವಂತಾಗಿದೆ ಎಂದು  ಟ್ವೀಟರ್ ನಲ್ಲಿ ಸರ್ಕಾರದ ವಿರುದ್ಧ  ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ