ಈ ಬಣ್ಣದ ಮೇಣದ ಬತ್ತಿಯನ್ನು ಹಚ್ಚುವುದರಿಂದ ಮನೆಯ ವಾಸ್ತುದೋಷ ನಿವಾರಣೆಯಾಗುತ್ತದೆ
ಸೋಮವಾರ, 21 ಸೆಪ್ಟಂಬರ್ 2020 (07:45 IST)
ಬೆಂಗಳೂರು : ಮನೆಯಲ್ಲಿ ಮೇಣದ ಬತ್ತಿ ಹಚ್ಚುವುದರ ಮೂಲಕ ಮನೆಯ ವಾಸ್ತುದೋಷವನ್ನು ನಿವಾರಿಸಬಹುದು. ಆದಕಾರಣ ಯಾವ ಬಣ್ಣದ ಮೇಣದ ಬತ್ತಿಯನ್ನು ಯಾವ ದಿಕ್ಕಿನಲ್ಲಿ ಹಚ್ಚಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
*ಮನೆಯ ಈಶಾನ್ಯ ಮೂಲೆಯಲ್ಲಿ ಹಸಿರು ಬಣ್ಣದ ಮೇಣದ ಬತ್ತಿಯನ್ನು ಹಚ್ಚಬೇಕು. ಇದರಿಂದ ಕೆಟ್ಟ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ.
*ಮನೆಯ ನೈರುತ್ಯ ಭಾಗದಲ್ಲಿ ಗುಲಾಬಿ ಅಥವಾ ಹಳದಿ ಬಣ್ಣದ ಮೇಣದ ಬತ್ತಿ ಹಚ್ಚಿದರೆ ಮನೆಯಲ್ಲಿ ಗಲಾಟೆ ಜಗಳ ನಡೆಯುವುದಿಲ್ಲ.
*ಹಣದ ಕೊರತೆ ನಿವಾರಿಸಲು ಮನೆಯ ದಕ್ಷಿಣ ಭಾಗದಲ್ಲಿ ಕೆಂಪು ಬಣ್ಣದ ಮೇಣದ ಬತ್ತಿಯನ್ನು ಹಚ್ಚಬೇಕು.
*ಮನೆಯಲ್ಲಿ ಶಾಂತಿ ನೆಲೆಸಿರಲು ಆಗ್ನೇಯ ದಿಕ್ಕಿನಲ್ಲಿ ನೀಲಿ ಬಣ್ಣದ ಮೇಣದ ಬತ್ತಿಯನ್ನು ಹಚ್ಚಿ.
*ವ್ಯಾಪಾರದಲ್ಲಿ ಅಭಿವೃದ್ಧಿಯಾಗಲು ಮನೆಯ ಉತ್ತರ ದಿಕ್ಕಿನಲ್ಲಿ ಬಿಳಿ ಬಣ್ಣದ ಮೇಣದ ಬತ್ತಿಯನ್ನು ಹಚ್ಚಿ.