ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಗೂ ದೇಹದ ಕೆಲವು ಭಾಗಗಳಲ್ಲಿ ಮಚ್ಚೆ ಇದ್ದೇ ಇರುತ್ತದೆ. ಆದರೆ ತುಟಿಯ ಮೇಲೆ ಮಚ್ಚೆ ಇದ್ದರೆ ಅದೃಷ್ಟ ಎಂದು ಕೆಲವರು ಹೇಳುತ್ತಾರೆ. ಇದು ಎಷ್ಟು ನಿಜ ಎಂದು ನೋಡೋಣ.
ಕೆಲವರಿಗೆ ತುಟಿಯ ಮೇಲ್ಭಾಗದಲ್ಲಿ ಇನ್ನು ಕೆಲವರಿಗೆ ತುಟಿಯ ಕೆಳ ಭಾಗದಲ್ಲಿ ಮಚ್ಚೆ ಇರಬಹುದು. ಇದಕ್ಕೆ ಅದರದ್ದೇ ಆದ ಅರ್ಥಗಳಿವೆ. ಅಸಲಿಗೆ ಎರಡೂ ಭಾಗದಲ್ಲಿ ಮಚ್ಚೆ ಇದ್ದರೂ ಅದು ನಮ್ಮ ಜೀವನಕ್ಕೆ ಅದೃಷ್ಟದ ಗುರುತಾಗಿರುತ್ತದೆ. ಮೊದಲು ತುಟಿಯ ಮೇಲೆ ಮಚ್ಚೆ ಇದ್ದರೆ ಏನು ಫಲ ನೋಡೋಣ.
ತುಟಿಯ ಮೇಲ್ಭಾಗದಲ್ಲಿ ಮಚ್ಚೆ ಇದ್ದರೆ ನೀವು ಕರುಣಾಮಯಿ ಮತ್ತು ಇತರರಿಗೆ ಸಹಾಯ ಹಸ್ತ ಚಾಚುವುದರಲ್ಲಿ ಮುಂದಿರುತ್ತೀರಿ ಎಂದರ್ಥ. ಹೀಗಾಗಿ ಇತರರು ನಿಮ್ಮ ಮೇಲೆ ಆಕರ್ಷಿತರಾಗುವುದು ಹೆಚ್ಚು. ಮಹಿಳೆಯರಿಗೆ ತುಟಿಯ ಮೇಲ್ಭಾಗದಲ್ಲಿ ಮಚ್ಚೆಯಿದ್ದರಂತೂ ಸುಂದರಿಯಾಗಿರುತ್ತಾರೆ ಮತ್ತು ಅವರು ಹುಡುಗರನ್ನು ಆಕರ್ಷಿಸುತ್ತಾರೆ.
ತುಟಿಯ ಕೆಳಭಾಗದಲ್ಲಿ ಮಚ್ಚೆಯಿದ್ದರೆ ಕುಟುಂಬಕ್ಕೆ ವಿಧೇಯರಾಗಿರುವ ವ್ಯಕ್ತಿ ಎಂದರ್ಥ. ನಿಮ್ಮ ಕೆಲಸದಲ್ಲಿ ಎಷ್ಟೇ ಬ್ಯುಸಿಯಿದ್ದರೂ ಕುಟುಂಬಕ್ಕಾಗಿ ಸಮಯ ಮೀಸಲಿಡುತ್ತೀರಿ. ಇಂತಹ ವ್ಯಕ್ತಿಗಳು ನಟನೆ, ಕಲೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಜೊತೆಗೆ ತಮ್ಮ ಸುತ್ತಲಿನವರ ಪಾಲಿಗೆ ಪ್ರೀತಿ ಪಾತ್ರರಾಗಿರುತ್ತಾರೆ ಎಂದರ್ಥ.