ನಾಲಿಗೆಯಲ್ಲಿ ಮಚ್ಚೆ ಇದ್ದರೆ ಏನರ್ಥ ತಿಳಿಯಿರಿ

Krishnaveni K

ಸೋಮವಾರ, 18 ಮಾರ್ಚ್ 2024 (10:58 IST)
Photo Courtesy: Twitter
ಬೆಂಗಳೂರು: ಕೆಲವರು ಹೇಳಿದ್ದೆಲ್ಲಾ ನಿಜವಾಗುತ್ತಿದ್ದರೆ ನಿನಗೆ ನಾಲಿಗೆಯಲ್ಲಿ ಮಚ್ಚೆ ಇದೆಯಾ ಎಂದು ಕೇಳುತ್ತಾರೆ. ನಾಲಿಗೆಯಲ್ಲಿ ಮಚ್ಚೆ ಇದ್ದರೆ ನಿಜವಾಗಿಯೂ ಜ್ಯೋತಿಷ್ಯ ಪ್ರಕಾರ ಅರ್ಥವೇನು ಇಲ್ಲಿದೆ ನೋಡಿ.

ನಾಲಿಗೆಯಲ್ಲಿ ಮೇಲ್ಭಾಗದಲ್ಲಿ ಕೆಲವರಿಗೆ ಒಂದೇ ಒಂದು ಮಚ್ಚೆ ಇರಬಹುದು. ಇಲ್ಲವೇ ಕೆಲವರಿಗೆ ನಾಲಿಗೆ ತುದಿಯಲ್ಲಿ ಮಚ್ಚೆ ಇರಬಹುದು. ಮತ್ತೆ ಕೆಲವರಿಗೆ ನಾಲಿಗೆಯಲ್ಲಿ ಹಲವು ಕಪ್ಪು ಮಚ್ಚೆಗಳ ಸಮೂಹವೇ ಇರಬಹುದು. ಇದೆಲ್ಲವೂ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಸೂಚಿಸುತ್ತದೆ.

ನಾಲಿಗೆಯಲ್ಲಿ ಮಚ್ಚೆ ಯಾವುದೇ ರೂಪದಲ್ಲಿ ಇದ್ದರೂ ಕೆಲವೊಂದು ರೀತಿಯ ಸಮಸ್ಯೆಗೂ ಕಾರಣವಾಗಬಹುದು. ನಾಲಿಗೆಯಲ್ಲಿ ಮಚ್ಚೆಯಿದ್ದರೆ ಅವರಿಗೆ ಜೀವನದಲ್ಲಿ ಮಾತು ಮತ್ತು ಅದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಎದುರಾಗುವ ಅಪಾಯವಿದೆ ಎಂಬ ನಂಬಿಕೆಯಿದೆ.  ಅಲ್ಲದೆ, ವಿದ್ಯಾಭ್ಯಾಸದಲ್ಲಿ ಕೆಲವೊಂದು ಅಡೆತಡೆಗಳು ಎದುರಾಗುವ ಸಾಧ‍್ಯತೆಯಿದೆ.

ಒಂದು ವೇಳೆ ನಿಮ್ಮ ನಾಲಿಗೆ ತುದಿಯಲ್ಲೇ ಮಚ್ಚೆ ಇದ್ದರೆ ನೀವು ಉತ್ತಮ ಆಹಾರ ಪ್ರಿಯರು, ತಿಂಡಿಪೋತರೂ ಆಗಿರುತ್ತೀರಿ ಎಂದರ್ಥ. ಅಲ್ಲದೆ, ನಿಮಗೆ ಪರಿಸ್ಥಿತಿಗೆ ತಕ್ಕಂತೆ ಮಾತನಾಡುವುದು, ಸಂದರ್ಭವನ್ನು ನಿಭಾಯಿಸುವ ಕಲೆ ಚೆನ್ನಾಗಿ ಕರಗತವಾಗಿರುತ್ತದೆ ಎಂದರ್ಥವಾಗಿದೆ. ಹೀಗಾಗಿ ನಾಲಿಗೆ ಮೇಲೆ ಮಚ್ಚೆ ಇದ್ದರೆ ಕೇವಲ ಅವರು ಹೇಳಿದ್ದೆಲ್ಲಾ ಸತ್ಯವಾಗುತ್ತದೆ ಎಂದು ಮಾತ್ರವಲ್ಲ. ಈ ಎಲ್ಲಾ ವಿಚಾರಗಳನ್ನೂ ಗಮನದಲ್ಲಿಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ