ಬೆಂಗಳೂರು: ಸೋಮವಾರ ಭಗವಾನ್ ಶಿವನಿಗೆ ಅರ್ಪಿತವಾದ ದಿನ. ಈ ದಿನ ಈ ಕೆಲಸ ಮಾಡುವುದರಿಂದ ಶಿವನ ಅನುಗ್ರಹಕ್ಕೆ ನೀವು ಪಾತ್ರರಾಗಬಹುದಾಗಿದೆ.
ಸೋಮವಾರದಂದು ಶಿವನನನ್ನು ಕುರಿತು ಮಂತ್ರ ಪಠಣೆ ಮಾಡಿ, ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾಗಿದೆ. ಶಿವ ಹೆಚ್ಚು ಅಲಂಕಾರ ಪ್ರಿಯನಲ್ಲ. ವೈಭವದ ಪೂಜೆಯನ್ನೂ ಬೇಡುವವನಲ್ಲ. ಆದರೆ ಭಕ್ತಿಯಿಂದ ನಾವು ಈ ಎರಡು ಸೇವೆ ಮಾಡುವುದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.
ಸೋಮವಾರಗಳಂದು ಯಾವುದಾದರೂ ಶಿವ ದೇವಾಲಯಕ್ಕೆ ತೆರಳಿ ಶಿವನಿಗೆ ಜೇನು ತುಪ್ಪದಿಂದ ಅಭಿಷೇಕ ಮಾಡಿಸಿ. ಇದರಿಂದ ನಿಮಗೆ ಉದ್ಯೋಗ ಮತ್ತು ವ್ಯವಹಾರ ಹಾಗೂ ಆರ್ಥಿಕವಾಗಿ ಬರುವ ಅಡಚಣೆಗಳು ನಿವಾರಣೆಯಾಗುತ್ತದೆ.
ಅದೇ ರೀತಿ, ಶಿವನಿಗೆ ಪ್ರಿಯವಾದ ರುದ್ರಾಭಿಷೇಕ ಮಾಡಿಸಿ. ಇದರಿಂದ ಶಿವನು ಸಂತೃಪ್ತಗೊಂಡು ಜೀವನದಲ್ಲಿ ಬಡುವ ಎಲ್ಲಾ ಕಷ್ಟಗಳನ್ನು ನಿವಾರಿಸಿ ನಿಮ್ಮನ್ನು ಅನುಗ್ರಹಿಸುತ್ತಾನೆ. ಜೊತೆಗೆ ಇಂದು ತಪ್ಪದೇ 108 ಬಾರಿ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿ.