ಹನುಮಾನ್ ಬೀಜ ಮಂತ್ರ ಯಾವುದು ಮತ್ತು ಇದನ್ನು ಓದುವುದರ ಫಲವೇನು

Krishnaveni K

ಸೋಮವಾರ, 10 ಫೆಬ್ರವರಿ 2025 (08:39 IST)
ಬೆಂಗಳೂರು: ಹನುಮಾನ್ ಬೀಜ ಮಂತ್ರ ಯಾವುದು ಮತ್ತು ಇದನ್ನು ಓದುವುದರ ಫಲವೇನು ಎಂಬ ಬಗ್ಗೆ ತಿಳಿದುಕೊಳ್ಳಲು ಇದನ್ನು ತಪ್ಪದೇ ಓದಿ.

ಹನುಮಾನ್ ವಿದ್ಯೆ, ಬುದ್ಧಿ, ಧೈರ್ಯ, ಶಕ್ತಿಗೆ ಅಧಿಪತಿ. ಆಂಜನೇಯ ಸ್ವಾಮಿಯ  ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ಪ್ರತಿನಿತ್ಯ ಹನುಮಾನ್ ಬೀಜ ಮಂತ್ರವನ್ನು ತಪ್ಪದೇ ಪಠಿಸಿ. ಇದರಿಂದ ನಮಗೆ ಒಳಿತಾಗುವುದು. ಹನುಮಾನ್ ಬೀಜ ಮಂತ್ರ ಹೀಗಿದೆ:

ಓಂ ಏಂ ಭ್ರೀಂ ಹನುಮತೇ
ಶ್ರೀರಾಮ ದೂತಾಯ ನಮಃ

ಎರಡೇ ಸಾಲುಗಳಾಗಿದ್ದರೂ ಈ ಕಿರಿದಾದ ಮಂತ್ರವು ಬೃಹತ್ ಅರ್ಥವನ್ನು ಮತ್ತು ಪ್ರಯೋಜನವನ್ನು ನಮಗೆ ನೀಡುತ್ತದೆ. ಶಾಂತ ಚಿತ್ತರಾಗಿ ಪದ್ಮಾಸನ ಹಾಕಿ ಕುಳಿತು ಹನುಮಾನ್ ಬೀಜ ಮಂತ್ರವನ್ನು ತಪ್ಪದೇ 108 ಬಾರಿ ಪ್ರತಿನಿತ್ಯ ಪಠಿಸಿ.

ಹನುಮಾನ್ ಬೀಜ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬಿದ್ದಿದ್ದರೆ, ನಕಾರಾತ್ಮಕ ಚಿಂತನೆಗಳಿಂದ ಮನಸ್ಸು ಚಂಚಲವಾಗಿದ್ದರೆ ನಿಯಂತ್ರಣಕ್ಕೆ ಬರುತ್ತದೆ. ತಪ್ಪದೇ ಪಠಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ