ನವರಾತ್ರಿಯ ಎರಡನೇ ದಿನ ಇಂದು ಬ್ರಹ್ಮಚಾರಿಣಿ ದೇವಿಯ ಪೂಜೆ ಮಾಡುವ ಮಂತ್ರ ಯಾವುದು

Krishnaveni K

ಶುಕ್ರವಾರ, 4 ಅಕ್ಟೋಬರ್ 2024 (08:39 IST)
ಬೆಂಗಳೂರು: ನವರಾತ್ರಿಯ ಎರಡನೇ ದಿನವಾಗಿರುವ ಇಂದು ದುರ್ಗಾದೇವಿಯನ್ನು ಬ್ರಹ್ಮಚಾರಿಣಿ ದೇವಿಯಾಗಿ ಪೂಜೆ ಮಾಡಲಾಗುತ್ತದೆ. ಬ್ರಹ್ಮಚಾರಿಣಿ ದೇವಿಯ ಪೂಜಾ ಮಂತ್ರ ಯಾವುದು ಇಲ್ಲಿದೆ ವಿವರ.

ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಪೂಜೆ ಮಾಡಿದರೆ ಎರಡನೇ ದಿನ ಬ್ರಹ್ಮಚಾರಿಣಿಯನ್ನು ಪೂಜೆ ಮಾಡಲಾಗುತ್ತದೆ. ಬ್ರಹ್ಮಚಾರಿಣಿ ದೇವಿ ಎಂದರೆ ಕಠಿಣ ತಪಸ್ಸು ಮಾಡಿದವಳು ಎಂದರ್ಥ. ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ರೂಪದ ದೇವಿಯನ್ನು ಆರಾಧಿಸಿದರೆ ಮಾನಸಿಕ ಮತ್ತು ದೈಹಿಕ ಕಷ್ಟಗಳೆಲ್ಲವೂ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ.

ಬ್ರಹ್ಮಚಾರಿಣಿ ದೇವಿಯ ಒಂದು ಕೈಯಲ್ಲಿ ಗುಲಾಬಿ ಇನ್ನೊಂದು ಕೈಯಲ್ಲಿ ಕಮಂಡಲವಿರುತ್ತದೆ. ಬ್ರಹ್ಮಚಾರಿಣಿ ಎಂದರೆ ಇನ್ನೂ ಅವಿವಾಹಿತ ಎಂದರ್ಥ. ಆಕೆ ಶಾಂತ ಸ್ವಭಾವವನ್ನು ಪ್ರತಿನಿಧಿಸುತ್ತಾಳೆ. ಹೀಗಾಗಿ ಬ್ರಹ್ಮಚಾರಿಣಿ ದೇವಿಯನ್ನು ಪೂಜೆ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ.

ಓಂ ದೇವಿ ಬ್ರಹ್ಮಚಾರಿಣಿಯೇ ನಮಃ

ಅಥವಾ

ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಈ ಮಂತ್ರವನ್ನು ಪಠಿಸುತ್ತಾ ದೇವಿಗೆ ನೈವೇದ್ಯ ಮಾಡಿ ಪೂಜೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ