ಮಹಾಲಯ ಅಮವಾಸ್ಯೆ ಎಂದರೆ ನವರಾತ್ರಿ ಆರಂಭ ಎಂದೇ ಲೆಕ್ಕ. ಇಂದು ಪಿತೃಪಕ್ಷದ ಕೊನೆಯ ದಿನವಾಗಿದ್ದು, ಗತಿಸಿ ಹೋದ ಹಿರಿಯರಿಗೆ ಎಳ್ಳು ನೀರು ಬಿಟ್ಟು, ಎಡೆ ಇಟ್ಟರೆ ಪಿತೃ ದೋಷಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿದೆ. ಗತಿಸಿ ಹೋದ ತಂದೆ-ತಾಯಿಗಳಿಗೆ ಆಯಾ ದಿನಕ್ಕೆ ಶ್ರಾದ್ಧ ಕಾರ್ಯ ಮಾಡಬಹುದು.
ಆದರೆ ಕೇವಲ ತಂದೆ-ತಾಯಿಯ ಕಾರ್ಯ ಮಾಡುವುದರಿಂದ ಕರ್ಮ ಕಳೆದಂತಲ್ಲ. ನಮ್ಮ ಪೂರ್ವಜರಿಗೂ ಈ ಒಂದು ದಿನ ಆಹಾರ ಕೊಡುವುದು ನಮ್ಮ ಕರ್ತವ್ಯವಾಗಿದೆ. ಪೂರ್ವಜರಿಗಾಗಿ ಮೀಸಲಾದ ದಿನ ಇದಾಗಿದ್ದು, ಇಂದು ಭಕ್ತಿಯಿಂದ ಪಿತೃಗಳ ಪೂಜೆ ಮಾಡಿದಲ್ಲಿ ಕುಟುಂಬದಲ್ಲಿ ಬರುವಂತಹ ಎಲ್ಲಾ ದೋಷಗಳೂ ನಿವಾರಣೆಯಾದಂತೆ.