ಪ್ರತಿ ದಿನವೂ ಸೂರ್ಯದೇವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಭಾನುವಾರ ಹಿಂದೂ ಧರ್ಮದ ಪ್ರಕಾರ ಸೂರ್ಯ ದೇವನಿಗೆ ಮೀಸಲಾದ ದಿನವಾಗಿದೆ. ಈ ದಿನದಂದು ನಾವು ಸೂರ್ಯದೇವನಿಗೆ ವಿಶೇಷ ಪೂಜೆಯನ್ನು ಮಾಡುವುದರಿಂದ ಸೂರ್ಯ ತೇಜದ ಪ್ರಭೆ ನಮ್ಮ ಬದುಕಿನಲ್ಲೂ ಪ್ರತಿಫಲಿಸುವುದು ಎಂಬ ನಂಬಿಕೆಯಿದೆ.
ಸೂರ್ಯನನ್ನು ನವಗ್ರಹಗಳಿಗೂ ಅಧಿಪತಿ ಎಂದು ಗುರುತಿಸಲಾಗಿದೆ. ಭೂಮಿಯಲ್ಲಿರುವ ಸಕಲ ಜೀವ ಜಂತುಗಳಿಗೂ ಸೂರ್ಯ ಬೇಕೇಬೇಕು. ಸೂರ್ಯ ಪ್ರಕಾಶ ಭೂಮಿಗೆ ಸ್ಪರ್ಶಿಸಿದರೆ ಮಾತ್ರ ಜಗತ್ತಿಗೆ ಬೆಳಕು ಸಿಗುವುದು. ಸೂರ್ಯನನ್ನು ಆರಾಧಿಸುವುದರಿಂದ ಶಕ್ತಿ ದೊರೆಯುವುದು, ಸಕಲ ದೂರವಾಗುವುದು ಎಂಬ ನಂಬಿಕೆ.
ಅನೇಕ ರೋಗಗಳನ್ನು ಗುಣ ಪಡಿಸುವ ಶಕ್ತಿ ಸೂರ್ಯ ರಶ್ಮಿಯಲ್ಲಿದೆ ಎಂಬುವುದನ್ನು ವಿಜ್ಞಾನವೂ ಹೇಳುತ್ತದೆ.
ಸೂರ್ಯನಿಗೆ ಮನೆಯಲ್ಲಿ ನಿತ್ಯವೂ ಪೂಜೆ ಸಲ್ಲಿಸಬಹುದು. ಬೆಳಗ್ಗೆ ಎದ್ದು, ಸ್ನಾನ ಮಾಡಿ, ಬಿಳಿ ಶುಭ್ರ ಬಟ್ಟೆ ಧರಿಸಿ, ಸೂರ್ಯನಿಗೆ ಆರ್ಘ್ಯ ಅರ್ಪಿಸಿ. ನಂತರ ಸೂರ್ಯ ಮಂತ್ರಗಳನ್ನು ಪಠಿಸಿ. ಸೂರ್ಯ ಗಾಯತ್ರಿ ಮಂತ್ರ ತಪ್ಪದೆ ಪಠಿಸಿ. ನಂತರ ತಮ್ಮೆಲ್ಲಾ ಬಯಕೆ ಈಡೇರಿಸಿಕೊಡುವಂತೆ ಸೂರ್ಯನಲ್ಲಿ ಪ್ರಾರ್ಥಿಸಿ.
ಇದರಿಂದ ಜೀವನದಲ್ಲಿ ಬರುವ ಕಷ್ಟಗಳು ದೂರವಾಗಿ, ಬಾಳಲ್ಲಿ ನೆಮ್ಮದಿ ನೆಲೆಸುತ್ತದೆ.