ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಸಿಗುವ ಲಾಭವೇನು ಗೊತ್ತಾ…?

ಬುಧವಾರ, 28 ಫೆಬ್ರವರಿ 2018 (07:20 IST)
ಬೆಂಗಳೂರು: ಮೃತ್ಯುಂಜಯ ಮಂತ್ರವನ್ನು "ಸಾವು ವಿಜಯದ" ಮಂತ್ರ ಎಂದು ಕರೆಯುತ್ತಾರೆ. ಮಹಾ ಮೃತ್ಯುಂಜಯ ಮಂತ್ರವು ಶಿವನಿಗೆ ಸಮರ್ಪಿತವಾಗಿದೆ. ಇದನ್ನು ಮಾರ್ಕಂಡೇಯ ಋಷಿ ರಚಿಸಿದ್ದಾರೆ ಎಂದು ಹೇಳಲಾಗುತ್ತದೆ.


ಓಂ ತ್ರಯಂಬಕಮ್ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವಬಂಧನಾನ್ ಮೃತ್ಯೊರ್ಮುಕ್ಷೀಯ ಮಾಂಮೃತಾಥ್


ಒಬ್ಬ ವ್ಯಕ್ತಿ ಗಂಭೀರ ರೋಗ ಮತ್ತು ಸಾವಿನ ಭಯವನ್ನು ಎದುರಿಸುತ್ತಿದ್ದರೆ ಅವನು ಶಿವನ ಪೂಜೆಯನ್ನು ಮಾಡಬೇಕು. ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ದಿನದಲ್ಲಿ ಅಥವಾ ರಾತ್ರಿಯ ಸಮಯದಲ್ಲಿ ಹೇಳಬಹುದು. ಇದರಿಂದ ನಮ್ಮ ಏಕಾಗೃತೆಯ ಸಾಮರ್ಥ್ಯ ಹೆಚ್ಚುವುದು. ಜೊತೆಗೆ ಉತ್ತಮ ನಿದ್ರೆಯನ್ನು ಹೊಂದಬಹುದಾಗಿದೆ. 108 ಬಾರಿ ಈ ಮಂತ್ರವನ್ನು ಪಠಿಸಿದರೆ ಇದರಿಂದ ಜೀವನದ ಏರು ಪೇರು ಎಲ್ಲವೂ ಸರಿಹೊಂದುವುದು ಎಂದು ಹೇಳಲಾಗುತ್ತದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ