ಮಕ್ಕಳ ಜಾತಕದಲ್ಲಿರುವ ಗುರುದೋಷ ನಿವಾರಣೆಯಾಗಲು ಈ ಪರಿಹಾರ ಮಾಡಿ
ಭಾನುವಾರ, 17 ನವೆಂಬರ್ 2019 (10:12 IST)
ಬೆಂಗಳೂರು : ಮಕ್ಕಳ ಜಾತಕದಲ್ಲಿ ಗುರುದೋಷವಿದ್ದಾಗ ಅವರಿಗೆ ಕಲಿಯುವ ಸಾಮರ್ಥ್ಯವಿದ್ದರೂ ಅವರು ಅದನ್ನು ಬಳಸಿಕೊಳ್ಳುವುದಿಲ್ಲ. ಪ್ರತಿನಿತ್ಯ ಅವಮಾನ ಅನುಭವಿಸುತ್ತಾರೆ. ಆದ್ದರಿಂದ ಮಕ್ಕಳ ಈ ದೋಷ ನಿವಾರಣೆಯಾಗಲು ಈ ಪರಿಹಾರ ಮಾಡಿ.
ಮಲಗಿರುವ ರಂಗನಾಥನ ಪುಟ್ಟ ವಿಗ್ರಹವನ್ನು ತೆಗೆದುಕೊಂಡು ಬಂದು, ಸಂಜೆಯ ಕಾಲದಲ್ಲಿ ಅಥವಾ ಪ್ರಾತಃ ಕಾಲದಲ್ಲಿ ಉತ್ತರಕ್ಕೆ ಮುಖ ಮಾಡಿ ದೇವರ ಮನೆಯಲ್ಲಿ ಒಂದು ಬಟ್ಟಲಿನಲ್ಲಿ ವಿಷ್ಣು ಮೂರ್ತಿ ಇಟ್ಟು ರಾಮತುಳಸಿಯನ್ನು ಅರ್ಪಿಸುತ್ತಾ ವಿಷ್ಣು ಸಹಸ್ರನಾಮ ಪಠಿಸಿ. ಬಳಿಕ ಪೂಜೆಯ ನಂತರ ಆ ರಾಮತುಳಸಿಯನ್ನು ನಿತ್ಯ ಮಕ್ಕಳಿಗೆ ಸೇವಿಸಲು ನೀಡಿ. ಹೀಗೆ ಮಾಡಿದರೆ ಮಕ್ಕಳ ಗುರುದೋಷ ನಿವಾರಣೆಯಾಗುತ್ತದೆ.