ಟಿಕ್ ಟಾಕ್ ಕರ್ಮಕಾಂಡ; ಮದುವೆಯಾಗುವುದಾಗಿ ನಂಬಿಸಿ ಟೋಪಿ ಹಾಕಿದ ಯುವತಿ

ಶನಿವಾರ, 16 ನವೆಂಬರ್ 2019 (11:36 IST)
ಬೆಂಗಳೂರು : ಮದುವೆಯಾಗುತ್ತೇನೆಂದು ನಂಬಿಸಿ ಟಿಕ್ ಟಾಕ್ ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ವ್ಯಕ್ತಿಯಿಂದ ಲಕ್ಷಗಟ್ಟಲೆ ಹಣ ವಸೂಲಿ ಮಾಡಿ ಮೋಸ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.




ಬೆಂಗಳೂರಿನ ವಿಜಯಲಕ್ಷ್ಮೀ ವಂಚಿಸಿದ ಮಹಿಳೆಯಾಗಿದ್ದು , ಶಿವಕುಮಾರ್  ಮೋಸ ಹೋದ ವ್ಯಕ್ತಿ. ಟಿಕ್ ಟಾಕ್ ನಲ್ಲಿ ಪರಿಚಯವಾದ ಇಬ್ಬರು ಬಳಿಕ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿ ಮೊಬೈಲ್ ನಂಬರ್ ಪಡೆದು ಚಾಟ್ ಮಾಡುತ್ತಿದ್ದರು, ಬಳಿಕ ಇಬ್ಬರು ಒಪ್ಪಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಅಷ್ಟೇ ಅಲ್ಲದೇ ಆತನಿಂದ ಚರ್ಚಿಗೆ ಅಂತ 4 ಲಕ್ಷ ಹಣ ವಸೂಲಿ ಮಾಡಿದ್ದಾಳೆ.


ಆದರೆ ಶಿವಕುಮಾರ್ ಮದುವೆ ತಯಾರಿ ನಡೆಸುವಾಗ ಆತನಿಗೆ ಕೈ ಕೊಟ್ಟು ದೂರವಾಗಿದ್ದಾಳೆ. ಅಷ್ಟಕ್ಕೇ ಸುಮ್ಮನಾಗದ ಆಕೆ ಹಣ ನೀಡುವಂತೆ ಒತ್ತಾಯಿಸಿದ್ದಲ್ಲದೇ ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಬಗ್ಗೆ ಶಿವಕುಮಾರ್ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ