ನಿಮ್ಮ ರಾಶಿಗೆ ಅನುಸಾರವಾಗಿ ನೀವು ಈ ಕೆಲಸ ಮಾಡಿದರೆ ಯಶಸ್ಸು ಖಚಿತ

ಭಾನುವಾರ, 6 ಅಕ್ಟೋಬರ್ 2019 (08:31 IST)
ಬೆಂಗಳೂರು : ಉದ್ಯೋಗ ಮಾಡುವಾಗ ಹುಟ್ಟಿದ ರಾಶಿಗೆ ಅನುಗುಣವಾಗಿ ಮಾಡಿದರೆ ಜೀವನದಲ್ಲಿ ಯಶಸ್ಸು ಕಾಣಬಹುದು. ಆದ್ದರಿಂದ ನಿಮ್ಮ ರಾಶಿಗೆ ಅನುಸಾರವಾಗಿ ನೀವು ಕೆಲಸ ಮಾಡಬೇಕಾದ ಕ್ಷೇತ್ರವನ್ನು ಆರಿಸಿಕೊಳ್ಳುವುದು ಸೂಕ್ತ .*ಮೇಷ ರಾಶಿ: ಇವರು ಸೇನೆ, ರಾಜಕೀಯ ರಂಗಗಳಲ್ಲಿ ಮಿಂಚುತ್ತಾರೆ, ಹಾಗೆ ಕೈಗಾರಿಕೋದ್ಯಮಿಯಾಗಿಯೂ ಸಹ ಯಶಸ್ಸನ್ನು ಕಾಣುತ್ತಾರೆ .

 

* ವೃಷಭ ರಾಶಿ: ಇವರು ಡಿಸೈನರ್ ಅಥವಾ ಬಾಣಸಿರಾದರೆ ಯಶಸ್ಸು ಕಾಣಬಹುದು.

 

* ಮಿಥುನ ರಾಶಿ: ಇವರು ತಾಂತ್ರಿಕ ಉದ್ಯೋಗ, ಮಾರ್ಕೆಟಿಂಗ್ , ಮಾರಾಟಗಾರರಾದರೆ ಯಶಸ್ಸು ಸಿಗುತ್ತದೆ.

 

* ಕಟಕ ರಾಶಿ:  ಇವರಿಗೆ ಬೋಧಕ ವೃತ್ತಿ ಮತ್ತು ಮನೋವಿಜ್ಞಾನ, ಸಮಾಜ ಸೇವೆ ಸೂಕ್ತವಾದ ಕೆಲಸ.

 

* ಸಿಂಹ ರಾಶಿ: ಇವರು ಕ್ರೀಡಾಕಾರರಾಗಿ ಯಶಸ್ಸು ಗಳಿಸುತ್ತಾರೆ.

 

* ಕನ್ಯಾ ರಾಶಿ: ವಾಣಿಜ್ಯೋದಮ ಕ್ಷೇತ್ರ ಇವರಿಗೆ ತುಂಬಾ ಸೂಕ್ತ.

 

* ತುಲಾ ರಾಶಿ: ಇವರಿಗೆ ನ್ಯಾಯ ಸರ್ಕಾರಿ ಸಾಮಾಜಿಕ ಕೆಲಸಗಳು ಮತ್ತು ಕಾನೂನು ವೃತ್ತಿ ಸೂಕ್ತವಾಗಿವೆ.

 

* ವೃಶ್ಚಿಕ ರಾಶಿ: ಪತ್ತೆದಾರಿಕೆ,ಶಸ್ತ್ರ ವೈದ್ಯರಾದರೆ ಉತ್ತಮ

 

* ಧನಸ್ಸು ರಾಶಿ: ಇತರರನ್ನು ಪ್ರೇರೇಪಿಸಲು ,ತರಬೇತಿ ನೀಡಲು, ಮಂತ್ರಿಗಳಾಗಿ ತತ್ವಜ್ಞಾನಿಯಾಗಿ ಯಶಸ್ಸು ಕಾಣುತ್ತಾರೆ .

 

* ಮಕರ ರಾಶಿ: ಐಟಿ, ಬ್ಯಾಂಕಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳು ಇವರಿಗೆ ಸೂಕ್ತ.

 

* ಕುಂಭ ರಾಶಿ: ವಿಜ್ಞಾನಿ, ವೈಮಾನಿಕ ರಂಗ, ಜೈವಿಕ ರ೦ಗಗಳಲ್ಲಿ ಇವರು ಯಶಸ್ಸು ಕಾಣುತ್ತಾರೆ.

 

* ಮೀನ ರಾಶಿ: ಕಲಾವಿದರಾಗಿ ಒಳ್ಳೆಯ ಹೆಸರನ್ನು ಗಳಿಸುತ್ತಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ