ವರಮಹಾಲಕ್ಷ್ಮೀ ಹಬ್ಬಕ್ಕೆ ಮುತ್ತೈದೆಯರಿಗೆ ನೀಡುವ ತಾಂಬೂಲದಲ್ಲಿ ಈ ವಸ್ತುಗಳು ಇರಲೇಬೇಕಂತೆ

ಗುರುವಾರ, 23 ಆಗಸ್ಟ್ 2018 (10:48 IST)
ಬೆಂಗಳೂರು : ಶ್ರಾವಣ ಮಾಸದ ಶುಭದಿನದಲ್ಲಿ ಬರುವುದು ವರಮಹಾಲಕ್ಷ್ಮೀ ವೃತ. ಈ ವೃತ ಪೌರ್ಣಮಿಯ ದಿನ ಮೊದಲು ಬರುವ ಶುಕ್ರವಾರದಂದು ಮಾಡುತ್ತಾರೆ. ವೃತದ ನಂತರ ಪೂಜೆಯನ್ನು ಮಾಡಿ ಮನೆಗೆ ಬರುವ ಮುತ್ತೈದೆಯರಿಗೆ ತಾಂಬೂಲವನ್ನು ನೀಡಬೇಕು. ಹೀಗೆ ಕೊಡುವ ತಾಂಬೂಲದಲ್ಲಿ ಈ ವಸ್ತುಗಳು ಇದ್ದಾಗ ಮಾತ್ರ ಆ ಪೂಜಾಫಲಗಳು ನಮಗೆ ದೊರೆಯುತ್ತೆ  ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.


ತಾಂಬೂಲದಲ್ಲಿ  ಅರಶಿನ ಕುಂಕುಮ, ಹೂವುಹಣ್ಣು, ಎಲೆ ಅಡಿಕೆ ಹಾಗೂ ಇದರ ಜೊತೆಗೆ ನೆನೆಸಿದ ಕಡಲೆಕಾಳನ್ನು ತಪ್ಪದೇ ನೀಡಬೇಕು. ಮಹಿಳೆಯರಿಗೆ ಸಾಮಾನ್ಯವಾಗಿ ಇರುವ ದೋಷವೆಂದರೆ ಅದು ಕುಜ ದೋಷ ಮತ್ತು ಚಂದ್ರದೋಷ. ಈ ದೋಷ ನಿವಾರಣೆಯಾಗಬೇಕಾದರೆ ಎಲೆಅಡಿಕೆ ಮತ್ತು ಕಡಲೆಕಾಳನ್ನು ಕೊಡಬೇಕು. ಹಾಗೇ ನೆನೆಸಿದ ಕಡಲೆಕಾಳನ್ನು ತಾಂಬೂಲದ ಜೊತೆ ಕೊಡುವುದರಿಂದ ಗುರುಗ್ರಹ ಕೂಡ ಬಲವಾಗುತ್ತೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ