ಗೃಹಪ್ರವೇಶ ಮಾಡುವಾಗ ಮನೆಯಲ್ಲಿ ಹಾಲನ್ನು ಉಕ್ಕಿಸುವುದು ಇದೇ ಕಾರಣಕ್ಕಂತೆ!

ಗುರುವಾರ, 15 ಮಾರ್ಚ್ 2018 (06:46 IST)
ಬೆಂಗಳೂರು : ಹೊಸದಾಗಿ ನಿರ್ಮಿಸಿದ ಮನೆಯ ಒಳಗೆ ಪ್ರವೇಶಿಸುವ ಸಮಯದಲ್ಲಿ ಅಥವಾ ಬೇರೆ ಮನೆಗೆ ಹೋಗುವ ಸಮಯದಲ್ಲಿ ಒಲೆ ಮೇಲೆ ಹಾಲು ಉಕ್ಕಿಸುವುದು ಸಂಪ್ರದಾಯ. ಹಾಲು ಉಕ್ಕಿದ ಮನೆಯಲ್ಲಿ ಎಲ್ಲವೂ ಒಳ್ಳೆಯದೇ ನಡೆಯುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹಾಗಿದ್ದರೆ ಅದರ ಹಿಂದಿರುವ ಕಾರಣ ಏನು ಗೊತ್ತಾ.


ಸಕಲ ಸಂಪತ್ತಿಗೂ ಅಧಿದೇವತೆ ಲಕ್ಷ್ಮಿದೇವಿ. ಆಕೆ ಸಮುದ್ರ ಗರ್ಭದಿಂದ ಜನಿಸಿದಳು. ಆಕೆಯ ಪತಿ ಶ್ರೀಹರಿಯ ವಾಸಸ್ಥಳ ಕ್ಷೀರ ಸಾಗರ(ಹಾಲಿನ ಸಮುದ್ರ). ಹಾಗಾಗಿಯೇ ಹಾಲು ಉಕ್ಕಿದರೆ ಅಷ್ಟೈಶ್ವರ್ಯಗಳು, ಭೋಗಭಾಗ್ಯಗಳು, ಪ್ರಶಾಂತತೆ, ಧನ, ಸಂತಾನ, ಅಭಿವೃದ್ಧಿ ಸಿದ್ಧಿಸುತ್ತದೆ ಎಂದು ನಂಬುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ