ವ್ಯಾಪಾರದಲ್ಲಿ ಲಾಭಗಳಿಸಬೇಕೆಂದರೆ ಕಚೇರಿಯ ವಾಸ್ತು ಹೀಗಿರಲಿ

ಶುಕ್ರವಾರ, 5 ಏಪ್ರಿಲ್ 2019 (13:20 IST)
ಬೆಂಗಳೂರು : ಜೀವನ ಸಾಗಿಸಲು ವ್ಯಕ್ತಿಗಳು ಯಾವುದಾದರೊಂದು ವ್ಯಾಪಾರಕ್ಕೆ ಕೈ ಹಾಕುತ್ತಾರೆ. ಈ ವ್ಯಾಪಾರದಲ್ಲಿ ಯಶಸ್ಸು ಕಾಣಬೇಕೆಂದು ಅವರು ಬಯಸುತ್ತಾರೆ. ಹಾಗಾಗಿ ವ್ಯಾಪಾರ ಮಾಡುವ ಮುನ್ನ ಪೂಜೆ, ಪುನಸ್ಕಾರ ಮಾಡುತ್ತಾರೆ. ಆದರೆ ಪೂಜೆ ಜೊತೆ ವಾಸ್ತುವಿನ ಬಗ್ಗೆಯೂ ಗಮನ ನೀಡಬೇಕು.

ಹೌದು. ವ್ಯಾಪಾರಕ್ಕಾಗಿ ಕಟ್ಟಡವನ್ನು ನಿರ್ಮಿಸುವಾಗ ಪೂರ್ವ ಭಾಗಕ್ಕೆ ಬಾವಿ ಅಥವಾ ನೀರಿನ ಮೂಲವಿರುವಂತೆ ನೋಡಿಕೊಳ್ಳಿ. ಹಾಗೇ ಗಾರ್ಡನ್ ಮತ್ತು ಪಾರ್ಕಿಂಗ್ ಗಾಗಿ ಈಶಾನ್ಯ ಜಾಗವನ್ನು ಮೀಸಲಿಡಿ. ನಿಮ್ಮ ಕಚೇರಿ ಮುಂದೆ ಯಾವುದೇ ಕಂಬ ಅಥವಾ ದೊಡ್ಡ ಮರ ಇರದಂತೆ ನೋಡಿಕೊಳ್ಳಿ. 

 

ಕಚೇರಿಯ ಮುಖ್ಯ ಬಾಗಿಲು ಎಂದೂ ಉತ್ತರಕ್ಕಿರಲಿ. ಇದು ಶುಭ ಎಂದು ಪರಿಗಣಿಸಲಾಗಿದೆ. ಅಲ್ಲದೇ ಕಚೇರಿ ನಿರ್ಮಾಣದ ಭೂಮಿ ಆಯತಾಕಾರದಲ್ಲಿರುವಂತೆ ನೋಡಿಕೊಳ್ಳಿ. ಇದು ವ್ಯಾಪಾರಸ್ಥರಿಗೆ ಉತ್ತಮ ಲಾಭ ತಂದುಕೊಡಲಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ