ಮನೆಯಲ್ಲಿ ಸದಾ ಶಾಂತಿ ನೆಲೆಸಿರಲು ಮನೆಯ ಈ ದಿಕ್ಕಿನ ಗೋಡೆಯ ಮೇಲೆ ಸ್ವಸ್ತಿಕ್ ಚಿತ್ರ ಬಿಡಿಸಿ
ಬುಧವಾರ, 6 ಫೆಬ್ರವರಿ 2019 (07:01 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿತ್ರಕ್ಕೆ ವಿಶೇಷವಾದ ಸ್ಥಾನವಿದೆ. ಇದು ತಾಯಿ ಲಕ್ಷ್ಮಿ ಹಾಗೂ ಗಣೇಶನ ಸಂಕೇತ ಎಂದು ಪೂಜಿಸಲಾಗುತ್ತದೆ. ಸ್ವಸ್ತಿಕ್ ಎಂದರೆ ಸಂಸ್ಕೃದಲ್ಲಿ , ಶುಭವಾಗಲಿ, ಕಲ್ಯಾಣವಾಗಲಿ ಎಂದರ್ಥ.
ವ್ಯಾಪಾರದಲ್ಲಿ ವೃದ್ಧಿ ಬಯಸುವವರು ಗುರುವಾರ ಮನೆಯ ಈಶಾನ್ಯ ಕೋಣೆಯಲ್ಲಿ ನೆಲವನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ ಅರಿಶಿನದಿಂದ ಸ್ವಸ್ತಿಕವನ್ನು ಬಿಡಿಸಬೇಕು. ನಂತ್ರ ಪೂಜೆ ಮಾಡಿ, ಬೆಲ್ಲವನ್ನು ಅರ್ಪಿಸಬೇಕು. ಸತತ 7 ಗುರುವಾರ ಇದನ್ನು ಮಾಡಬೇಕು. ಮನೆಯ ಸಮೃದ್ಧಿಗಾಗಿ ಮನೆಯ ಮುಖ್ಯದ್ವಾರದ ಮುಂದೆ ಅರಿಶಿನ, ಕುಂಕುಮ ಅಥವಾ ರಂಗೋಲಿಯಿಂದ ಸ್ವಸ್ತಿಕವನ್ನು ಬಿಡಿಸಿಡಬೇಕು.
ಮನೆಯಲ್ಲಿ ಸದಾ ಶಾಂತಿ ನೆಲೆಸಿರಬೇಕು ಎನ್ನುವವರು ಈಶಾನ್ಯ ಕೋಣೆಯ ಗೋಡೆಗೆ ಅರಿಶಿನದ ಸ್ವಸ್ತಿಕ್ ಬಿಡಿಸಬೇಕು. ಬಯಕೆ ಈಡೇರಬೇಕೆಂದ್ರೆ ದೇವರ ಮನೆಯಲ್ಲಿ ಸ್ವಸ್ತಿಕವನ್ನು ಬಿಡಿಸಿ ಅದ್ರ ಮೇಲೆ ಇಷ್ಟದ ದೇವರ ಫೋಟೋ ಇಟ್ಟು ಪೂಜೆ ಮಾಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.