ಪತ್ನಿ ಮಾಂಸದ ಅಡುಗೆ ಮಾಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಪತಿ
ಮಂಗಳವಾರ, 5 ಫೆಬ್ರವರಿ 2019 (13:13 IST)
ಬೆಂಗಳೂರು : ಪತ್ನಿ ಮಾಂಸದ ಅಡುಗೆ ಮಾಡಲಿಲ್ಲ ಎಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗಂಗಮ್ಮನಗುಡಿಯ ಕಲಾನಗರದಲ್ಲಿ ನಡೆದಿದೆ.
ರಾಜು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರಾಜು ಭಾನುವಾರ ಮಧ್ಯಾಹ್ನ ಮಾಂಸದ ಅಡುಗೆ ಮಾಡುವಂತೆ ತನ್ನ ಪತ್ನಿಗೆ ಹೇಳಿ ಹೊರಗೆ ಹೋಗಿದ್ದನು. ನಂತರ ರಾಜು ಕುಡಿದ ಮತ್ತಿನಲ್ಲಿ ಸಂಜೆ ಮನೆಗೆ ಬಂದಾಗ ಪತ್ನಿ ಮಾಂಸ ತರಲು ಹೊರಗೆ ಹೋಗಿದ್ದಳು.
ಆದರೆ ಈ ವಿಚಾರ ತಿಳಿಯದೆ ರಾಜು ಹೆಂಡತಿ ಮಾಂಸದ ಅಡುಗೆ ಮಾಡಲಿಲ್ಲವೆಂದು ಬೇರಸಗೊಂಡು ಕುಡಿದ ಮತ್ತಿನಲ್ಲಿ ಟಿನ್ನರ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.