ಶುಕ್ರವಾರ, 31 ಜುಲೈ 2020 (09:11 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
*ಮೇಷರಾಶಿ: ಯಾವುದೇ ಆಪ್ತ ಸಂಬಂಧಿಕರ ಬೆಂಬಲದಿಂದ ನೀವು ನಿಮ್ಮ ವ್ಯಾಪಾರವನ್ನು ಉತ್ತಮವಾಗಿ ಮಾಡಬಹುದು. ಇದು ನಿಮಗೆ ಆರ್ಥಿಕ ಲಾಭವನ್ನು ನೀಡುತ್ತದೆ.
*ವೃಷಭ ರಾಶಿ: ಅದೃಷ್ಟವನ್ನು ಅವಲಂಬಿಸಬೇಡಿ. ನಿಮ್ಮ ಾರೋಗ್ಯ ಸುಧಾರಿಸಲು ಪ್ರಯತ್ನಿಸಿ. ಏಕೆಂದರೆ ಅದೃಷ್ಟವು ಒಂದು ಸೋಮಾರಿತನವಾಗಿದೆ.
*ಮಿಥುನ ರಾಶಿ : ನಿಮ್ಮ ಅಪಾರ ವಿಶ್ವಾಸ ಮತ್ತು ಸುಲಭದ ಕೆಲಸದ ವೇಳಾಪಟ್ಟಿ ಇಂದು ವಿಶ್ರಾಂತಿಗೆ ಸಾಕಷ್ಟು ಸಮಯ ನೀಡುತ್ತದೆ.
*ಕಟಕ ರಾಶಿ : ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ವೈಯಕ್ತಿಕ ಸಂಬಂಧಗಳನ್ನು ದುರ್ಬಳಕೆ ಮಾಡುವುದು ನಿಮ್ಮ ಪತ್ನಿಗೆ ಕೋಪಬರಿಸುತ್ತದೆ.
*ಸಿಂಹ ರಾಶಿ : ನೀವು ಪ್ರಯಾಣಿಸಲು ತುಂಬಾ ದುರ್ಬಲರಾಗಿದ್ದರಿಂದ ದೀರ್ಘ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ.
*ಕನ್ಯಾ ರಾಶಿ : ತನ್ನ ಹಣವನ್ನು ಹೇಗೆ ಸಂಗ್ರಹಿಸುವುದು ಎಂಬ ಕೌಶಲ್ಯವನ್ನು ಇಂದು ನೀವು ಕಲಿಯಬಹುದು. ಇದರಿಂದ ನಿಮ್ಮ ಹಣವನ್ನು ಉಳಿಸಬಹುದು.
*ತುಲಾ ರಾಶಿ : ಕಳೆದ ದಿನಕ್ಕೆ ಹೋಲಿಸಿದರೆ ಇಂದು ನಿಮ್ಮ ಆರ್ಥಿಕ ಜೀವನ ಉತ್ತಮವಾಗಲಿದೆ. ನೀವು ಬಯಸುವುದನೆಲ್ಲಾ ಪಡೆಯುವ ಒಳ್ಳೆಯ ದಿನ.
*ವೃಶ್ಚಿಕ ರಾಶಿ : ಕೆಲಸದಿಂದ ಇಂದು ನೀವು ಸ್ವಲ್ಪ ಒತ್ತಡಕ್ಕೊಳಗಾಗಬಹುದು. ಇಂದು ನಿಮಗೆ ಯಾರಾದರೂ ಹಾನಿ ಮಾಡಲು ಪ್ರಯತ್ನಿಸುತ್ತಾರೆ.
*ಧನು ರಾಶಿ : ಆಹ್ವಾನಿಸದ ಯಾವುದೇ ಅತಿಥಿ ಇಂದು ನಿಮ್ಮ ಮನೆಗೆ ಬರಬಹುದು. ಆದರೆ ಈ ಅತಿಥಿಯ ದೃಷ್ಟದ ಕಾರಣ ಇಂದು ನೀವು ಆರ್ಥಿಕ ಲಾಭವನ್ನು ಪಡೆಯಬಹುದು.
*ಮಕರ ರಾಶಿ : ಮನರಂಜನೆ ಮತ್ತು ಹೋರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಮಾಡಬೇಡಿ. ನಿಮ್ಮ ಮನೆಯ ಪರಿಸ್ಥಿತಿ ಸ್ವಲ್ಪ ಅನಿರೀಕ್ಷಿತವಾಗಿರುತ್ತದೆ.
*ಕುಂಭ ರಾಶಿ :ನೀವು ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತೀರಿ. ಆದರೆ ಸ್ವಾರ್ಥಿಗಳಾದ ಮುಂಗೋಪಿ ವ್ಯಕ್ತಿಯ ಸಹವಾಸವನ್ನು ತಪ್ಪಿಸಿ.
* ಮೀನ ರಾಶಿ : ಪ್ರತಿ ವ್ಯಕ್ತಿಯನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ.