ಎಲ್ಲರೂ ಕೊರೋನಾದಲ್ಲಿ ಮುಳುಗಿದ್ದರೆ ವಿರಾಟ್ ಕೊಹ್ಲಿ-ಅನುಷ್ಕಾ ಸಹಾಯ ಮಾಡಿದ್ದು ಯಾರಿಗೆ ಗೊತ್ತಾ?

ಗುರುವಾರ, 30 ಜುಲೈ 2020 (11:20 IST)
ಮುಂಬೈ: ದೇಶದಲ್ಲಿ ಎಲ್ಲೆಡೆ ಕೊರೋನಾ ಸದ್ದು ಮಾಡುತ್ತಿದ್ದರೆ ಅಸ್ಸಾಂ, ಬಿಹಾರ ರಾಜ್ಯಗಳಲ್ಲಿ ಕೊರೋನಾ ಜತೆಗೆ ಪ್ರವಾಹದಿಂದಾಗಿ ಜನ, ವನ್ಯ ಜೀವಿಗಳು ಸಂಕಷ್ಟದಲ್ಲಿವೆ.


ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ನಟಿ ಅನುಷ್ಕಾ ಶರ್ಮಾ ಈ ಪ್ರವಾಹ ಪೀಡಿತರಿಗೆ ನೆರವಾಗಲು ಮುಂದೆ ಬಂದಿದ್ದಾರೆ.

ನಾನು ಮತ್ತು ಅನುಷ್ಕಾ ಕೆಲವು ಪ್ರವಾಹ ಪೀಡಿತರ ಸಂರಕ್ಷಿಸುವ ಸಂಘಟನೆಗಳೊಂದಿಗೆ ಕೈ ಜೋಡಿಸಿ ಅಲ್ಲಿನ ಜನರಿಗೆ ನೆರವಾಗುತ್ತಿರುವುದಾಗಿ ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ, ಅಭಿಮಾನಿಗಳಿಗೂ ಪ್ರವಾಹ ಪೀಡಿತರಿಗೆ ನೆರವಾಗಲು ಕರೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ